ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇಶನ್‌ನಿಂದ ಜಿಲ್ಲಾಧಿಕಾರಿ ಕಚೇರಿ ಧರಣಿ

ಕಾಸರಗೋಡು: ಕೇರಳ ಹೋಟೆಲ್ ಆಂಡ್ ರೆಸ್ಟೋರೆಂಟ್ ಅಸೋಸಿಯೇ ಶನ್ ಕಾಸರಗೋಡು ಜಿಲ್ಲಾ ಸಮಿತಿ ಆಶ್ರಯದಲ್ಲಿ ಅಗತ್ಯ ಸಾಮಗ್ರಿಗಳ ಬೆಲೆ ಏರಿಕೆ, ಹೆಚ್ಚುತ್ತಿರುವ ಸಮನಾಂತರ ಹೋಟೆಲ್ ಗೂಡಂಗಡಿಗಳ ವಿರುದ್ಧ ಹೋಟೆಲ್‌ಗಳನ್ನು ಮುಚ್ಚುಗಡೆಗೊಳಿಸಿ ಜಿಲ್ಲಾ ಅಧಿಕಾರಿ ಮಾರ್ಚ್, ಧರಣಿ ನಡೆಸಲಾಯಿತು. ಧರಣಿಯನ್ನು ರಾಜ್ಯ ಕೋಶಾಧಿಕಾರಿ ಮುಹಮ್ಮದ್ ಶರೀಫ್ ಉದ್ಘಾಟಿಸಿದರು. ಜಿಲ್ಲಾ ಅಧ್ಯಕ್ಷ ನಾರಾಯಣ ಪೂಜಾರಿ ಅಧ್ಯಕ್ಷತೆ ವಹಿಸಿದರು. ರಾಜ್ಯ ಉಪಾಧ್ಯಕ್ಷ ಸುಗುಣನ್ ಪ್ರಧಾನ ಭಾಷಣ ಮಾಡಿದರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾಧ್ಯಕ್ಷ ಅಹಮ್ಮದ್ ಶರೀಫ್, ಕೆಎಚ್‌ಆರ್‌ಎ ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಪೊದುವಾಳ್ ಮುಖ್ಯ ಅತಿಥಿಗಳಾಗಿದ್ದರು. ಹಲವರು ಮಾತನಾಡಿದರು. ಮುಹಮ್ಮದ್, ಅಬ್ದುಲ್ಲ, ಪ್ರಕಾಶನ್, ಸತ್ಯನಾಥನ್, ಶೆಫೀಕ್, ಅಜೇಶ್, ಬಿಜು, ರಘುವೀರ್ ಪೈ ಭಾಗವಹಿಸಿದರು.

You cannot copy contents of this page