ಬಿಎಂಎಸ್ ಕುಂಜತ್ತೂರು ಘಟಕ ಕುಟುಂಬ ಮಿಲನ

ಮಂಜೇಶ್ವರ: ಬಿಎಂಎಸ್ ಕುಂಜ ತ್ತೂರು ಯೂನಿಟ್ ಕುಟುಂಬ ಮಿಲನ ಕಾರ್ಯಕ್ರಮ ಜರಗಿತು. ಬಿಎಂಎಸ್ ಕರ್ನಾಟಕ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಬೆಳ್ತಂಗಡಿ ಉದ್ಘಾಟಿಸಿದರು.  ಜಿಲ್ಲಾ ಜೊತೆ ಕಾರ್ಯದರ್ಶಿ ದಿನೇಶ್ ಬಂಬ್ರಾಣ, ವಿಎಚ್‌ಪಿ ಮಂಜೇಶ್ವರ ಪ್ರಖಂಡ ಅಧ್ಯಕ್ಷ ಕೃಷ್ಣ ಶಿವಕೃಪಾ ಕುಂಜತ್ತೂರು, ಮಂಜೇಶ್ವರ ವಲಯ ಅಧ್ಯಕ್ಷ ರವಿ ಎಂ.ಕೆ ಕೋಳ್ಯೂರು, ವಾರ್ಡ್ ಪ್ರತಿನಿಧಿ ರಾಜೇಶ್ ಮಜಲ್ ಹಾಗೂ ಕಾರ್ಮಿಕರು ಭಾಗವಹಿಸಿದರು. ಯೂನಿಟ್ ಅಧ್ಯಕ್ಷ ರಾಘವ ಮಜಲ್ ಅಧ್ಯಕ್ಷತೆ ವಹಿಸಿದರು. ರವಿ ಮಜಲ್ ಸ್ವಾಗತಿಸಿ, ನವೀನ ಕಣ್ವತೀರ್ಥ ವಂದಿಸಿದರು. 

You cannot copy contents of this page