ಕಾಸರಗೋಡು: ತಿರುವೋಣಂ ದಿನವಾದ ಕಾಸರಗೋಡು ಸಮುದ್ರ ಕಿನಾರೆಯಲ್ಲಿ ನಿನ್ನೆ ಸಂಜೆ ಯುವಕರ ಮಧ್ಯೆ ಪರಸ್ಪರ ಗುಂಪು ಘರ್ಷಣೆ ನಡೆದಿದ್ದು, ಅದನ್ನು ನಿಯಂತ್ರಿಸಲು ಕೊನೆಗೆ ಪೊಲೀಸರಿಗೆ ಲಾಠಿ ಪ್ರಹಾರ ನಡೆಸಬೇಕಾಗಿ ಬಂತು.
ಲೈಟ್ ಹೌಸ್ ಸಮುದ್ರ ಕಿನಾರೆಯಲ್ಲಿ ಕೆಲವರು ನಿನ್ನೆ ಸಂಜೆ ಹಾಡು ಇರಿಸಿ ಡ್ಯಾನ್ಸ್ ಮಾಡುತ್ತಿದ್ದರು. ಆಗ ಯುವಕನೋರ್ವ ತನ್ನ ಮೊಬೈಲ್ ಫೋನ್‌ನಲ್ಲಿ ಅಲ್ಲಿಗೆ ಬಂದಿದ್ದ ಯುವತಿಯೋರ್ವೆಯ ಫೋಟೋ ಕ್ಲಿಕ್ಕಿಸಿದ್ದನು. ಅದನ್ನು ಕಂಡ ಕೆಲವರು ಯುವಕರು ಪ್ರಶ್ನಿಸಿದಾಗ ಅದು ಪರಸ್ಪರ ವಾಗ್ವಾದಕ್ಕೆ ದಾರಿ ಮಾಡಿಕೊಟ್ಟು ನಂತರ ಘರ್ಷಣೆಗೂ ದಾರಿ ಮಾಡಿಕೊಟ್ಟಿತು. ಆಗ ತಕ್ಷಣ ಅಲ್ಲಿಗೆ ಪೊಲೀಸರು ಆಗಮಿಸಿ ಘರ್ಷಣೆಯಲ್ಲಿ ತೊಡಗಿರುವವರ ಮೇಲೆ ಲಾಠಿ ಪ್ರಹಾರ ನಡೆಸಿ, ಅವರನ್ನು ಅಲ್ಲಿಂದ ಚದುರಿಸಿದರು. ನಂತರವಷ್ಟೇ ಉದ್ರಿಕ್ತ ಸ್ಥಿತಿ ಶಮನಗೊಂಡಿತು.