80 ಗ್ರಾಂ ಗಾಂಜಾ ಸಹಿತ ರಿಕ್ಷಾ ಕಸ್ಟಡಿಗೆ: ಓರ್ವ ಸೆರೆ

ಕಾಸರಗೋಡು:  ನಗರದ ತಳಂಗರೆ ತೆರುವತ್‌ನಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚ ರಣೆಯಲ್ಲಿ ಆಟೋ ರಿಕ್ಷಾವೊಂದರಲ್ಲಿ ಸಾಗಿಸುತ್ತಿದ್ದ 80 ಗ್ರಾಂ ಗಾಂಜಾ ಪತ್ತೆಹಚ್ಚಿ ಅದರ ಸಹಿತ ಆಟೋ ರಿಕ್ಷಾವನ್ನು ಕಸ್ಟಡಿಗೆ ತೆಗೆದುಕೊಂಡಿದೆ.

ಇದಕ್ಕೆ ಸಂಬಂಧಿಸಿ ತಳಂಗರೆ ಕುನ್ನಿಲ್‌ನ ಮುಹಮ್ಮದ್  ಫೈಸಲ್ (32) ಎಂಬಾತನ್ನು ಬಂಧಿಸಿ  ಪ್ರಕರಣ ದಾಖಲಿಸಲಾಗಿದೆ. ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಪ್ರಿವೆಂಟೀವ್ ಆಫೀಸರ್ ಉಣ್ಣಿಕೃಷ್ಣನ್ ಕೆ, ಸಿಇಒಗಳಾದ ಮೈಮೋಳ್,  ಜೋನ್, ರಾಜೇಶ್ ಪಿ, ಶಂಸುದ್ದೀನ್ ವಿ.ಟಿ ಮತ್ತು ನಿದೀಶ್ ಕೆ ಎಂಬಿವರು ಒಳಗೊಂಡಿದ್ದರು.

RELATED NEWS

You cannot copy contents of this page