ಓಣಂ ಹಬ್ಬಾಚರಣೆ ಮಧ್ಯೆ ಪಾಳು ಬಾವಿಗೆ ಬಿದ್ದ ಬಾಲಕ : ಬಾಲಕನ ಸ್ಥಿತಿ ಗಂಭೀರ 

ಕಾಸರಗೋಡು:  ಓಣಂ ಆಚರಣೆ ಕಾರ್ಯಕ್ರಮಕ್ಕೆ ತೆರಳಿದ್ದ 15ರ ಹರೆಯದ ಬಾಲಕ ಪಾಳುಬಾವಿಗೆ ಬಿದ್ದ ಘಟನೆ ನಡೆದಿದೆ. ಮಾಹಿತಿ ತಿಳಿದು ಸ್ಥಳಕ್ಕೆ ತಲುಪಿದ ಚೀಮೇನಿ ಅಗ್ನಿಶಾಮದಳ  ಬಾಲಕನನ್ನು ಮೇಲೆತ್ತಿ ಆಸ್ಪತ್ರೆಗೆ ತಲುಪಿಸಿದೆ. ಪುಲ್ಲಾಂಞಿಪ್ಪಾರ ನಿವಾಸಿಯಾದ ಸನೂಪ್ (15)  ಅಪಾಯಕ್ಕೆಡೆ ಯಾದ ಬಾಲಕ.

ನಿನ್ನೆ ರಾತ್ರಿ 8.45ರ ವೇಳೆ ಚೀಮೇನಿ ಚೆಂಬ್ರಕಾನದಲ್ಲಿ ಜರಗಿದ ಓಣಂ ಹಬ್ಬಾಚರಣೆ ಕಾರ್ಯ ಕ್ರಮಕ್ಕೆ ಸನೂಪ್ ಹಾಗೂ ಗೆಳೆಯರು  ತಲುಪಿದ್ದರು. ಕಾರ್ಯ ಕ್ರಮ ನಡೆಯುತ್ತಿದ್ದ ಮಧ್ಯೆ ಗೆಳೆ ಯರೊಂದಿಗೆ  ಮೂತ್ರಶಂಕೆಗೆಂದು ಹೋದಾಗ  ಆವರಣವಿಲ್ಲದ ಬಾವಿಗೆ ಬಿದ್ದಿದ್ದಾನೆ.  ಗೆಳೆಯರು ಬೊಬ್ಬೆ ಹಾಕಿದ ಹಿನ್ನೆಲೆಯಲ್ಲಿ  ಅಲ್ಲಿದ್ದವರು ಸ್ಥಳಕ್ಕೆ ತಲುಪಿದ ರಾದರೂ ಬಾಲಕನನ್ನು ಮೇಲೆತ್ತೆಲು ಸಾಧ್ಯವಾಗಲಿಲ್ಲ. ಬಳಿಕ  ಅಗ್ನಿಶಾಮ ಕದಳ ತಲುಪಿದ್ದು, ಸ್ಟೇಶನ್ ಆಫೀಸರ್ ವಿಜಯನ್ ನೇತೃತ್ವದಲ್ಲಿ ಬಾಲಕನನ್ನು ರಕ್ಷಿಸಿ ಚೆರ್ವತ್ತೂರು  ಖಾಸಗಿ ಆಸ್ಪತ್ರೆಗೆ ದಾಖಲಿಸಲಾ ಗಿತ್ತು. ಆದರೆ ಗಂಭೀರ ಸ್ಥಿತಿಯಲ್ಲಿ ದ್ದುದರಿಂದ ಬಳಿಕ ಕಣ್ಣೂರಿನ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

You cannot copy contents of this page