ಕಾಸರಗೋಡು: ಬ್ರಹ್ಮಶ್ರೀ ನಾರಾಯಣಗುರು ಜಯಂತಿಯಂಗ ವಾಗಿ ನೆಲ್ಲಿಕುಂಜೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿವಿಧ ಕಾರ್ಯ ಕ್ರಮಕ್ಕೆ ಚಾಲನೆ ನೀಡಲಾಯಿತು. ಧ್ವಜಾರೋ ಹಣ, ಗುರುಪೂಜೆ ಜರಗಿತು. ಸಂಘದ ಅಧ್ಯಕ್ಷ ಎನ್. ಸತೀಶ್ ಧ್ವಜಾರೋಹಣ ಗೈದರು. ಮುಕುಂದನ್ ಗುರುಸಂದೇಶ ನೀಡಿದರು. ಅರ್ಚಕ ಅನೀಶ್, ಉಪಾಧ್ಯಕ್ಷ ಗಣೇಶ್ ಪಾರೆಕಟ್ಟೆ, ಕೋಶಾಧಿಕಾರಿ ಉಮೇಶ್, ಸದಸ್ಯರಾದ ಆರ್.ಪಿ. ರಮೇಶ್ ಬಾಬು, ನಿರ್ಮಲಾ ಉಪೇಂದ್ರನ್, ನಿರ್ಮಲಾ ಅಚ್ಯುತನ್, ಸುಮಿತ್ರ, ಆಚರಣೆ ಸಮಿತಿ ಅಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಅರವಿಂದನ್, ಸುನಿಲ್, ಬಿಜೇಶ್, ಶರತ್, ರಮೇಶ್ ಭಾಗವಹಿಸಿದರು. ಕಾರ್ಯ ದರ್ಶಿ ಮಹೇಶ್ ಸ್ವಾಗತಿಸಿ, ಸುಕೀರ್ತಿ ವಂದಿಸಿದರು. ಮಧ್ಯಾಹ್ನ ಗುರುಪೂಜೆ, ಅನ್ನ ಸಂತರ್ಪಣೆ ಜರಗಿತು. ಸಂಜೆ ೬.೩೦ರಿಂದ ಭಜನೆ, ರಾತ್ರಿ ೮ಕ್ಕೆ ಮಹಾಪೂಜೆ ನಡೆಯಲಿದೆ.






