ತೋಟಕ್ಕೆ ತೆರಳಿ ನಾಪತ್ತೆಯಾಗಿದ್ದ ಗೃಹಿಣಿಯ ಮೃತದೇಹ ತೋಡಿನಲ್ಲಿ ಪತ್ತೆ

ಅಡೂರು: ಅಡಿಕೆ ಹೆಕ್ಕಲು ತೋಟಕ್ಕೆ ಹೋಗಿ ಬಳಿಕ ನಾಪತ್ತೆಯಾಗಿದ್ದ ಗೃಹಿಣಿ ಸಮೀಪದ ತೋಡಿನಲ್ಲಿ  ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.  ಮಲ್ಲಂಪಾರೆ ತಿಮ್ಮನಗುಂಡಿಯ ದಿ| ಚೋಮಣ್ಣ ನಾಯ್ಕರ ಪತ್ನಿ ಗುಲಾಬಿ ಭಾ (68) ಅವರ ಮೃತದೇಹ  ನಿನ್ನೆ ಅಗ್ನಿಶಾಮಕದಳ ಹಾಗೂ ನಾಗರಿಕರು ನಡೆಸಿದ ಶೋಧ ವೇಳೆ ಪತ್ತೆಯಾಗಿದೆ.

ಮೊನ್ನೆ ಸಂಜೆ ಗುಲಾಬಿ ಭಾ ತೋಟಕ್ಕೆ  ತೆರಳಿದ್ದರು. ಬಳಿಕ  ಮನೆಗೆ ಬಾರದ ಹಿನ್ನೆಲೆಯಲ್ಲಿ ಮನೆಯವರು ಶೋಧ ನಡೆಸಿದಾಗ ತೋಟದ ಬಳಿಯ ತೋಡಿನ ಬದಿ ಚಪ್ಪಲಿ ಕಂಡುಬಂದಿತ್ತು. ಇದರಿಂದ ಅಗ್ನಿಶಾಮಕದಳ ಹಾಗೂ ನಾಗರಿಕರು ಶೋಧ ಆರಂಭಿಸಿದ್ದರು. ಕೈಕಾಲು ತೊಳೆ ಯಲೆಂದು ತೋಡಿಗೆ ಇಳಿದಾಗ ಆಯತಪ್ಪಿ ನೀರಿನಲ್ಲಿ ಕೊಚ್ಚಿ ಹೋಗಿ ಮೃತಪಟ್ಟಿರ ಬಹು ದೆಂದು ಅಂದಾ ಜಿಸಲಾಗಿದೆ.  ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ವ-ಗೃಹಕ್ಕೆ ಕೊಂಡೊಯ್ದ ಅಂತ್ಯಸಂಸ್ಕಾರ ನಡೆಸಲಾಯಿತು.

ಮೃತರು ಮಕ್ಕಳಾದ ಜನಾರ್ದನ, ರೇವತಿ, ಅಳಿಯ, ಸೊಸೆ ಸಹಿತ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

You cannot copy contents of this page