ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ ಪಾನ್ ಮಸಾಲೆ ವಶ: ಓರ್ವ ಬಂಧನ

ಉಪ್ಪಳ: ಸ್ಕೂಟರ್‌ನಲ್ಲಿ ಸಾಗಿಸುತ್ತಿದ್ದ 2000 ಪ್ಯಾಕೆಟ್ ಪಾನ್ ಮಸಾಲೆ ವಶಪಡಿಸಿಕೊಂಡು ಈ ಸಂಬಂಧ ಓರ್ವನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.  ಬೇಕೂರು ಕೋಡಿಬೈಲು ಬಾಲ ನಡ್ಕ ಹೌಸ್‌ನ ಬಶೀರ್ ಮೊಹ ಮ್ಮದ್ ಮಲಬಾರಿ (37) ಎಂಬಾತ ಬಂಧಿತ ಆರೋಪಿಯಾಗಿದ್ದಾನೆ.  ನಿನ್ನೆ ಬೆಳಿಗ್ಗೆ  ಉಪ್ಪಳ ಭಾಗಕ್ಕೆ ತೆರಳುತ್ತಿದ್ದ ಸ್ಕೂಟರ್‌ನ್ನು ಪತ್ಪಾಡಿ ರಸ್ತೆಯಲ್ಲಿ ಎಸ್‌ಐ  ವಿಶಾಖ್ ಹಾಗೂ ಪೊಲೀ ಸ್ ಚಾಲಕ ನಿತೇಶ್ ನೇತೃತ್ವದಲ್ಲಿ ತಡೆದು ನಿಲ್ಲಿಸಿ ತಪಾಸಣೆ ನಡೆಸಿದಾಗ ಅದರಲ್ಲಿ ಪಾನ್ ಮಸಾಲೆ ಪತ್ತೆಯಾಗಿದೆ.

RELATED NEWS

You cannot copy contents of this page