ಹೊಳೆಗಳಿಂದ ಅನಧಿಕೃತ ಹೊಯ್ಗೆ ಸಂಗ್ರಹ: 12 ಮಂದಿ ಅನ್ಯರಾಜ್ಯ ಕಾರ್ಮಿಕರ ಸೆರೆ

ಕುಂಬಳೆ: ಹೊಳೆಗಳಿಂದ ಅನಧಿಕೃತವಾಗಿ ಹೊಯ್ಗೆ ಸಂಗ್ರಹ ಕೆಲಸದಲ್ಲಿ  ತೊಡಗಿಕೊಂಡ ಆರೋಪದಂತೆ ಅನ್ಯ ರಾಜ್ಯ ಕಾರ್ಮಿಕರಾದ 12 ಮಂದಿಯನ್ನು ಕುಂಬಳೆ  ಪೊಲೀಸರು ಬಂಧಿಸಿದ್ದಾರೆ.

ಪೇರಾಲ್ ಕಣ್ಣೂರು ರಸ್ತೆಯ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಬಿಹಾರ, ಉತ್ತರಪ್ರದೇಶ ನಿವಾಸಿಗಳಾದ ವಿನೋದ್, ಮಣಿಲಾಲ್, ನಿಶಾದ್, ನಾಗೇಂದ್ರ, ದೀಪಕ್ ಕುಮಾರ್, ಮಣಿರಾಜ್ ಕುಮಾರ್, ಅರುಣ್, ಅಮರ್‌ಜಿತ್, ಧರ್ಮೇಂದ್ರ, ಉಮೇಶ್, ಜಿತ್ತು, ಸುಭಾಷ್ ಬಿನ್ ಎಂಬಿವರನ್ನು ಬಂಧಿಸಲಾಗಿದೆ.

ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಹೊಳೆಗಳಿಂದ ಹೊಯ್ಗೆ  ಅನಧಿಕೃತವಾಗಿ ಸಂಗ್ರಹ ತೀವ್ರಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಅದರ ವಿರುದ್ಧ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಹೊಯ್ಗೆ ಸಂಗ್ರಹ ಕೆಲಸದಲ್ಲಿ ಅನ್ಯ ರಾಜ್ಯ ಕಾರ್ಮಿಕರು ತೊಡಗಿಕೊಂಡಿರುವ ಬಗ್ಗೆ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ  ಕುಂಬಳೆ ಠಾಣೆ ಇನ್‌ಸ್ಪೆಕ್ಟರ್ ಕೆ.ಪಿ. ವಿನೋದ್ ಕುಮಾರ್, ಎಸ್.ಐ ಶ್ರೀಜೇಶ್ ನೇತೃತ್ವದ ಪೊಲೀಸರು ನಿನ್ನೆ ಇವರನ್ನು ಬಂಧಿಸಿದ್ದಾರೆ.

RELATED NEWS

You cannot copy contents of this page