ಕುಂಬಳೆಯಲ್ಲಿ ಗ್ಯಾಸ್ ಏಜೆನ್ಸಿ ಮುಂಭಾಗ ಯೂತ್ ಲೀಗ್ ಪ್ರತಿಭಟನೆ

ಕುಂಬಳೆ: ಕಚೇರಿಯ ಮುಂದೆ  ಸರದಿ ಸಾಲಲ್ಲಿ ನಿಂತವರಿಗೆ ಗ್ಯಾಸ್ ಸಿಲಿಂಡರ್ ನೀಡದೆ ವಾಪಸ್ ಕಳುಹಿಸುವ ಕ್ರಮವನ್ನು ಪ್ರತಿಭಟಿಸಿ ಕುಂಬಳೆಯಲ್ಲಿ ಗ್ಯಾಸ್ ಏಜೆನ್ಸಿ ಕಚೇರಿಗೆ ಯೂತ್ ಲೀಗ್ ಕಾರ್ಯಕರ್ತರು ಮಾರ್ಚ್ ನಡೆಸಿದರು. ಮನೆಗಳಿಗೆ ನೇರವಾಗಿ ತಲುಪಿಸುವ ವ್ಯವಸ್ಥೆ ಕೊನೆಗೊಳಿಸಿ ಕಚೇರಿಯ ಮುಂಭಾಗದಲ್ಲಿ ಗ್ರಾಹಕರನ್ನು ಸರದಿಯಲ್ಲಿ ನಿಲ್ಲಿಸಿ ಗ್ಯಾಸ್ ಸಿಲಿಂಡರ್ ನೀಡುವ ವ್ಯವಸ್ಥೆ ಅಧಿಕೃತರು ಮಾಡಿದ್ದು, ಆದರೆ ಸರದಿಯಲ್ಲಿ ನಿಂತವರಿಗೆ ಕೂಡಾ ಸಿಲಿಂಡರ್ ನೀಡದೆ ಸತಾಯಿಸುವ ಕ್ರಮವನ್ನು ಪ್ರತಿಭಟಿಸಿ ಕುಂಬಳೆ ಯೂತ್ ಲೀಗ್ ಪಂಚಾಯತ್ ಸಮಿತಿ  ನೇತೃತ್ವದಲ್ಲಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.

You cannot copy contents of this page