ಗಾಂಜಾ ಸಹಿತ ಓರ್ವ ಸೆರೆ

ಕಾಸರಗೋಡು: ನಗರದ ಎಂ.ಜಿ. ರಸ್ತೆಯಲ್ಲಿ ಕಾಸರಗೋಡು ಎಕ್ಸೈಸ್ ಸರ್ಕಲ್ ಇನ್ಸ್‌ಪೆಕ್ಟರ್ ಅರುಣ್ ಡಿ ನೇತೃತ್ವದ ತಂಡ ನಿನ್ನೆ ನಡೆಸಿದ ತಪಾಸಣೆಯಲ್ಲಿ 28 ಗ್ರಾಂ  ಗಾಂಜಾ ಕೈವಶವಿರಿಸಿದ ಓರ್ವನನ್ನು ಬಂಧಿಸಿದೆ. ಕೊರಕ್ಕೋಡು ನಿವಾಸಿ ನೌಶಾದ್ ಬಂಧಿತ ಆರೋಪಿ. ಆತನ ವಿರುದ್ಧ ಎನ್‌ಡಿಪಿಎಸ್ ಕಾನೂನು ಪ್ರಕಾರ ಪ್ರಕರಣ ದಾಖಲಿಸಲಾಗಿದೆ. ಈ ದಾಲಿ ನಡೆಸಿದ ಅಬಕಾರಿ ತಂಡದಲ್ಲಿ ಅಸಿಸ್ಟೆಂಟ್ ಎಕ್ಸೈಸ್ ಇನ್ಸ್‌ಪೆಕ್ಟರ್ ಗ್ರೇಡ್), ಜನಾರ್ದನನ್, ಐ.ಬಿ. ಪ್ರಿವೆಂಟಿವ್ ಆಫೀಸರ್ ಬಿಜೋಯ್ ಇ.ಕೆ, ಸಿಇಒಗಳಾದ ಸಿಜಿನ್ ಸಿಜಿಲ್ ಸಿ, ಜಿತೇಂದ್ರನ್ ಕೆ. ಯವರು ಒಳಗೊಂಡಿದ್ದಾರೆ.

You cannot copy contents of this page