ಕರ್ನಾಟಕ ಮದ್ಯ ಪತ್ತೆ: ಓರ್ವ ಸೆರೆ

ಕಾಸರಗೋಡು: ಮಧೂರು ಉದಯಗಿರಿಯಲ್ಲಿ ಕಾಸರಗೋಡು ಅಬಕಾರಿ ರೇಂಜ್ ಕಚೇರಿಯ ಎಕ್ಸೈಸ್ ಇನ್‌ಸ್ಪೆಕ್ಟರ್ ಜೋಸೆಫ್ ಜೆ ನೇತೃತ್ವದ ಅಬಕಾರಿ ತಂಡ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ 7.74 ಲೀಟರ್ (180 ಎಂಎಲ್‌ನ 43 ಪ್ಯಾಕೆಟ್) ಕರ್ನಾಟಕ ನಿರ್ಮಿತ ಮದ್ಯ ಪತ್ತೆಹಚ್ಚಿಕೊಂಡಿದೆ.

ಇದಕ್ಕೆ ಸಂಬಂಧಿಸಿ ಪನ್ನಿಪ್ಪಾರೆ ಎಂ.ಜಿ.ನಗರದ ರಾಧಾಕೃಷ್ಣನ್ ಪಿ (37) ಎಂಬಾತನನ್ನು ಬಂಧಿಸಿ ಆತ ಚಲಾಯಿಸುತ್ತಿದ್ದ ದ್ವಿಚಕ್ರ ವಾಹನವನ್ನು ಅಬಕಾರಿ ತಂಡ ವಶಕ್ಕೆ ತೆಗೆದುಕೊಂಡಿದೆ.

ಅಸಿಸ್ಟೆಂಟ್ ಎಕ್ಸೈಸ್ ಇನ್‌ಸ್ಪೆಕ್ಟರ್ (ಗ್ರೇಡ್) ರಾಜೀವನ್ ಎ.ವಿ, ಸಿಇಒಗಳಾದ ರಾಜೇಶ್ ಪಿ, ಕಣ್ಣನ್‌ಕುಂಞಿ, ಅಜೆಯ್ ಎಂಬಿವರು ಈ ಕಾರ್ಯಾಚರಣೆ ನಡೆಸಿದ ಅಬಕಾರಿ ತಂಡದಲ್ಲಿ ಒಳಗೊಂಡಿದ್ದರು.

RELATED NEWS

You cannot copy contents of this page