ಕಬ್ಬಿಣದ ಗೇಟು ದೇಹದ ಮೇಲೆ ಬಿದ್ದು ಮಗು ಮೃತ್ಯು

ಕಾಸರಗೋಡು: ಆಟವಾಡುತ್ತಿದ್ದಾಗ ಮನೆ ಮುಂಭಾಗದ ಕಬ್ಬಿಣದ ಗೇಟ್ ದೇಹದ ಮೇಲೆ ಬಿದ್ದು ಎರಡೂವರೆ ವರ್ಷ ಪ್ರಾಯದ ಮಗು ಮೃತಪಟ್ಟ ಘಟನೆ ನಡೆದಿದೆ. ಉದುಮ ಪಳ್ಳಂ ತೆಕ್ಕೇಕರದ ಮಾಹಿನ್ ರಾಸಿಯ- ರಹೀಮ ದಂಪತಿಯ ಪುತ್ರ ಅಬುತಾಹಿರ್ ಮೃತಪಟ್ಟ ಮಗುವಾಗಿದೆ. ಮಾಂಗಾಡ್ ಕುಳಿಕುನ್ನುವಿನಲ್ಲಿರುವ ಸಂಬಂಧಿಕರ ಮನೆಗೆ ಮಗು ಸಹಿತ ಹೆತ್ತವರು ತಲುಪಿದ್ದರು. ನಿನ್ನೆ ಮಧ್ಯಾಹ್ನ ವೇಳೆ ಅಲ್ಲಿ ಮಗು ಆಟವಾಡುತ್ತಿದ್ದಾಗ ಕಬ್ಬಿಣದ ಗೇಟು ದೇಹದ ಮೇಲೆ ಬಿದ್ದಿದೆ. ಶಬ್ದ ಕೇಳಿ ತಲುಪಿದ ಮನೆಯವರು  ಕೂಡಲೇ ಮಗುವನ್ನು ಕಾಸರಗೋಡಿನ ಆಸ್ಪತ್ರೆಗೆ ತಲುಪಿಸಿದರೂ ಜೀವ ರಕ್ಷಿಸಲಾಗಲಿಲ್ಲ.

RELATED NEWS

You cannot copy contents of this page