ಬೈಕ್‌ನಲ್ಲಿ ಎಂಡಿಎಂಎ ಪತ್ತೆ: ಯುವಕ ಸೆರೆ

ಕಾಸರಗೋಡು: ನಿಲ್ಲಿಸಿದ್ದ ಬೈಕನ್ನು ಪೊಲೀಸರು ತಪಾಸಣೆಗೊಳ ಪಡಿ ಸಿದಾಗ ಅದರ ಸೀಟಿನ ಅಡಿಭಾಗದಲ್ಲಿ ಬಚ್ಚಿಡಲಾಗಿದ್ದ ಮಾದಕ ವಸ್ತುವಾದ 7.030 ಗ್ರಾಂ ಎಂಡಿಎಂಎ ಪತ್ತೆಹಚ್ಚಿದ್ದಾರೆ.

ಇದಕ್ಕೆ ಸಂಬಂಧಿಸಿ ಹೊಸದುರ್ಗ ಞ್ಞಾಣಿಕಡವಿನ ಕೆ.ಕೆ. ನೌಫಲ್ (40) ಎಂಬಾತನನ್ನು ಹೊಸದುರ್ಗ ಪೊಲೀಸ್ ಠಾಣೆಯ ಎಸ್‌ಐ ಎನ್. ಅನ್ಸಾರ್ ನೇತೃತ್ವದ ಪೊಲೀಸರು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಪೊಲೀಸರು ನಿನ್ನೆ ಪಡನ್ನಕ್ಕಾಡಿನಲ್ಲಿ ಈ ಕಾರ್ಯಾಚರಣೆ ನಡೆಸಿದ್ದಾರೆ. ಬೈಕ್‌ನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿ ದ್ದಾರೆ. ಎಸ್‌ಐ ರಾಜೀವ್ ಕುಮಾರ್ ಮತ್ತು ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ಜ್ಯೋತಿಷ್ ಎಂಬವರು ಈ ಕಾರ್ಯಾಚರಣೆ ನಡೆಸಿದ ತಂಡದಲ್ಲಿ ಒಳಗೊಂಡಿದ್ದರು.

Leave a Reply

Your email address will not be published. Required fields are marked *

You cannot copy content of this page