ರಸ್ತೆಗಳಲ್ಲಿ ಜಾನುವಾರುಗಳ ಠಿಕಾಣಿ : ವಾಹನ ಸಂಚಾರಕ್ಕೆ ಸಮಸ್ಯೆ

ಮಂಜೇಶ್ವರ: ಉಪ್ಪಳ ಸಹಿತ ವಿವಿಧ ಪ್ರದೇಶಗಳ ಜನನಿಬಿಡ ಸ್ಥಳ, ರಸ್ತೆಗಳಲ್ಲಿ ಜಾನುವಾರುಗಳು ಅಲೆ ದಾಡುತ್ತಿದ್ದು, ಸಾರ್ವಜನಿಕರಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಜಾನುವಾ ರುಗಳು ದಿಢೀರ್ ಆಗಿ ರಸ್ತೆ ಪ್ರವೇಶಿ ಸುವುದರಿಂದಾಗಿ ವಾಹನ ಸವಾರರು, ಪಾದಚಾರಿಗಳು ಸಮಸ್ಯೆಗೀಡಾಗುತ್ತಿದ್ದು, ಅಪಘಾತಕ್ಕೂ ಕಾರಣವಾಗುತ್ತಿದೆ. ರಸ್ತೆಯಲ್ಲೇ ಠಿಕಾಣಿ ಹೂಡಿ ವಾಹನ ಸವಾರರಿಗೆ ಭೀತಿ ಸೃಷ್ಟಿಸುವ ಜಾನು ವಾರುಗಳೂ ಇಲ್ಲಿವೆ. ದನ ಸಾಕುವವರು ಅದನ್ನು ಮೇಯಲು ಬಿಡುವುದೇ ಈ ಸಮಸ್ಯೆಗೆ ಕಾರಣವಾಗಿದ್ದು, ಮಂಜೇಶ್ವರ ಪರಿಸರದಲ್ಲೂ ಈ ಸ್ಥಿತಿ ಕಂಡು ಬರು ತ್ತಿದೆ. ಜಾನುವಾರುಗಳ ವಾರೀಸುದಾರರು ಅವುಗಳನ್ನು ಕಟ್ಟಿಹಾಕಿ ಸಾಕಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.

RELATED NEWS

You cannot copy contents of this page