ಯುವಕ ನೇಣುಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ

ಕುಂಬಳೆ: ಕೂಲಿ ಕಾರ್ಮಿಕನಾದ ಯುವಕ ಮನೆಯೊಳಗೆ ನೇಣು ಬಿಗಿದು ಸಾವಿಗೀಡಾದ ಸ್ಥಿತಿಯಲ್ಲಿ ಪತ್ತೆ ಯಾಗಿದ್ದಾರೆ.  ಹೇರೂರು ಬಿ ಸಿ ರೋಡ್ ನಿವಾಸಿ  ವಿಠಲ ನಾಯ್ಕ ಎಂಬವರ ಪುತ್ರ ಕೃಷ್ಣ ನಾಯ್ಕ (39) ಮೃತಪಟ್ಟ ವ್ಯಕ್ತಿ. ನಿನ್ನೆ ರಾತ್ರಿ ಊಟ ಮಾಡಿ ನಿದ್ರಿಸಿದ್ದ ಇವರು ಇಂದು ಬೆಳಿಗ್ಗೆ ಎದ್ದಿರಲಿಲ್ಲ. ಮನೆಯವರು ಕರೆದರೂ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ಬೆಡ್‌ರೂಮ್‌ನ ಬಾಗಿಲು ಮುರಿದು ನೋಡಿದಾಗ ಕೃಷ್ಣ ನಾಯ್ಕ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.  ಕೂಡಲೇ ಅವರನ್ನು ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಿದ್ದು, ಅಷ್ಟರೊಳಗೆ ಮೃತಪಟ್ಟಿದ್ದರು.

ಮೃತರು ತಂದೆ, ತಾಯಿ ಸರಸ್ವತಿ, ಸಹೋದರ ಸಹೋದರಿಯರಾದ ರಾಜೇಂದ್ರ, ಜನಾರ್ದನ, ಮಂಜುಳ, ವಿಜಯಲಕ್ಷ್ಮಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

RELATED NEWS

You cannot copy contents of this page