ದೀನ್‌ದಯಾಳ್ ಉಪಾಧ್ಯಾಯ ಸಂಸ್ಮರಣೆ,ಸದಸ್ಯತ್ವ ಅಭಿಯಾನಕ್ಕೆ ಚಾಲನೆ

ಕಾಸರಗೋಡು: ಬಿಜೆಪಿಯ ಸದಸ್ಯತ್ವ ಅಭಿಯಾನಕ್ಕೆ ಜಿಲ್ಲೆಯಲ್ಲಿ ಚಾಲನೆ ನೀಡಲು ತಲುಪಿದ ಬಿಜೆಪಿ ರಾಜ್ಯ ಸಮಿತಿ ಅಧ್ಯಕ್ಷ ಕೆ. ಸುರೇಂದ್ರನ್ ನಗರದ 32ನೇ ವಾರ್ಡ್‌ನ ಕೆ.ಎನ್. ವೆಂಕಟ್ರಮಣ ಹೊಳ್ಳ, ರಾಮಕೃಷ್ಣ ಹೊಳ್ಳ ಇವರ ನಿವಾಸದಲ್ಲಿ ದೀನ್‌ದಯಾಳ್ ಉಪಾಧ್ಯಾಯರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿದರು. ಈ ವೇಳೆ ನಿವೃತ್ತ ಡಿವೈಎಸ್‌ಪಿ ಕೆ.ಪಿ. ಮೋಹನ್‌ದಾಸ್‌ರಿಗೆ ಬಿಜೆಪಿ ಸದಸ್ಯತ್ವ ನೀಡಿ ಸದಸ್ಯತ್ವ ಅಭಿಯಾನಕ್ಕೆ ಸುರೇಂದ್ರನ್ ಚಾಲನೆ ನೀಡಿದರು. ವಾಮನ್‌ರಾವ್ ಬೇಕಲ್ ಇವರಿಗೆ ಈ ವೇಳೆ ಸದಸ್ಯತ್ವ ನೀಡಲಾಯಿತು. 153ನೇ ಬೂತ್‌ನ ವಿವಿಧ ಮನೆಗಳಿಗೆ ಭೇಟಿ ನೀಡಿ ನೂತನ ಸದಸ್ಯತ್ವ ನೀಡಲಾಯಿತು. ರಾಜ್ಯ ಸಮಿತಿ ಸದಸ್ಯೆ ಸವಿತಾ ಟೀಚರ್, ಜಿಲ್ಲಾ ಉಪಾಧ್ಯಕ್ಷ ಸುಧಾಮ ಗೋಸಾಡ, ಜಿಲ್ಲಾ ಕಾರ್ಯದರ್ಶಿ ಮನುಲಾಲ್, ಪ್ರಧಾನ ಕಾರ್ಯದರ್ಶಿ ವಿಜಯ ಕುಮಾರ್ ರೈ, ಮಂಡಲ ಪ್ರಧಾನ ಕಾರ್ಯದರ್ಶಿ ಗುರುಪ್ರಸಾದ್ ಪ್ರಭು, ಸುಕುಮಾರ್ ಕುದ್ರೆಪ್ಪಾಡಿ, ಪ್ರೇಮ್‌ಜಿತ್, ಶ್ರೀಲತಾ ಟೀಚರ್, ಅಶ್ವಿನಿ ಬೀರಂತಬೈಲು, ಕಿಶೋರ್ ಕುಮಾರ್, ಅರುಣ್‌ಕುಮಾರ್ ಶೆಟ್ಟಿ, ಪುರಂದರ ಶೆಟ್ಟಿ, ಪ್ರೇಮಾ ಪುರಂದರ, ಅರುಣಾ ರಾಮಕೃಷ್ಣ ಹೊಳ್ಳ, ಕಾರ್ಯಕರ್ತರು ಭಾಗವಹಿಸಿದರು.

RELATED NEWS

You cannot copy contents of this page