ಕೊಡ್ಯಮ್ಮೆ ನುಸ್ರತ್ತುಲ್ ಇಸ್ಲಾಂ ಸಂಘ ವಾರ್ಷಿಕ, ಮಿಲಾದ್ ಮೆಹ್‌ಫಿಲ್ ಇಂದಿನಿಂದ

ಕುಂಬಳೆ: ಇಲ್ಲಿನ ನುಸ್ರತ್ತುಲ್ ಇಸ್ಲಾಂ ಸಂಘ ಇದರ 22ನೇ ವಾರ್ಷಿಕ ಹಾಗೂ ಮಿಲಾದ್ ಮೆಹ್‌ಫಿಲ್  ಇಂದು ಹಾಗೂ ನಾಳೆ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಉಜಾರ್ ತ್ವಾಹ ನಗರದಲ್ಲಿ ನಡೆಯುವ ಕಾರ್ಯಕ್ರ ಮದ ಬಗ್ಗೆ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ. ಇಂದು ಸಂಜೆ 4ಕ್ಕೆ ಧ್ವಜಾರೋಹಣ, ಬಳಿಕ ವಿದ್ಯಾರ್ಥಿಗಳಿಂದ ಮಿಲಾದ್ ರ‍್ಯಾಲಿ  ನಡೆಯಲಿದೆ. ರಾತ್ರಿ 7 ಗಂಟೆಗೆ ಮಿಲಾದ್ ಮೆಹ್‌ಫಿಲ್‌ನ್ನು ಕೊಡ್ಯಮ್ಮೆ ಜಮಾಯತ್ ಮುದರಿಸ್ ಸಲೀಂ ಅಹ್‌ಸನಿ ಉದ್ಘಾಟಿಸುವರು. ಅಬೂಬಕರ್ ಸಾಲೂದ್ ನಿಸಾನಿ ಅಧ್ಯಕ್ಷತೆ ವಹಿಸುವರು. ಖತೀಬ್ ಮಹಮೂದ್ ಸಅದಿ ಪ್ರಾರ್ಥನೆ ನಡೆಸುವರು. ಹಲವರು ಉಪಸ್ಥಿತರಿರುವರು. ನಾಳೆ ಬೆಳಿಗ್ಗೆ ೯ಕ್ಕೆ ಇಸ್ಲಾಮಿಕ ಕಲಾ ಕಾರ್ಯಕ್ರಮಗಳು ನಡೆಯಲಿದೆ. ರಾತ್ರಿ 7ಕ್ಕೆ ವಾರ್ಷಿಕ ಸಮ್ಮೇಳನ, ಸಮಾರೋಪ ಸಮಾರಂಭ ಜರಗಲಿದ್ದು, ಅಬ್ದುಲ್ ಮಜೀದ್ ಫೈಸಿ ಉದ್ಘಾಟಿಸುವರು. ಅಶ್ರಫ್ ಕೊಡ್ಯಮ್ಮೆ ಅಧ್ಯಕ್ಷತೆ ವಹಿಸುವರು.  ಇದೇ ವೇಳೆ ಕೊಡ್ಯಮ್ಮೆ ನುಸ್ರತ್ತುಲ್ ಇಸ್ಲಾಂ ಸಂಘದ ಪ್ರಥಮ ಕೆ. ಹಂಸ ಮುಸ್ಲಿಯಾರ್ ಪುರಸ್ಕಾರವನ್ನು  ಮದ್ರಸಾ ಅಧ್ಯಾಪಕ, ಇಮಾಂ ಆಗಿದ್ದ ಎ.ವಿ. ಅಬ್ದುಲ್ಲ ಉಸ್ತಾದ್‌ರಿಗೆ ಪ್ರದಾನ ಮಾಡಲಾಗುವುದು. ಈ ಬಗ್ಗೆ ನಡೆಸಿದ ಸುದ್ದಿಗೋಷ್ಠಿಯಲ್ಲಿ ಅಧ್ಯಕ್ಷ ಅಶ್ರಫ್ ಕೊಡ್ಯಮ್ಮೆ, ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಹಿಮಾನ್, ಸಿದ್ದಿಕ್ ಉಜಾರ್, ಯೂಸಫ್ ಕೊಡ್ಯಮ್ಮೆ, ಫೈಸಲ್ ಉಜಾರ್, ಅಬ್ದುಲ್ ರಹ್ಮಾನ್, ಬಶೀರ್ ಭಾಗವಹಿಸಿದರು.

You cannot copy contents of this page