ಕುಂಬಳೆಯಲ್ಲಿ ಆಟೋ ಕಾರ್ಮಿಕರಿಗೆ ಜನಮೈತ್ರಿ ಪೊಲೀಸ್‌ನಿಂದ ತರಗತಿ

ಕುಂಬಳೆ: ಕುಂಬಳೆ ಠಾಣೆಯ ಜನಮೈತ್ರಿ ಸುರಕ್ಷಾ ಯೋಜನೆಯಂಗವಾಗಿ ಪೇಟೆಯ ಆಟೋ ಕಾರ್ಮಿ ಕರಿಗೆ ತಿಳುವಳಿಕಾ ತರಗತಿ ನಡೆಸಲಾಯಿತು. ಕುಂಬಳೆ ಸ್ಟೇಷನ್ ಎಸ್.ಎಚ್.ಒ. ವಿನೋದ್ ಕುಮಾರ್ ನೇತೃತ್ವ ನೀಡಿದರು. ಅವರು ಟ್ರಾಫಿಕ್ ಎಂ.ವಿ ಆಕ್ಟ್, ಮಾದಕ ಪದಾರ್ಥ, ಆಟೋ ಕಾರ್ಮಿಕರ ಜೀವನ ಗುಣಮಟ್ಟ ಹೆಚ್ಚಿಸು ವುದು ಎಂಬೀ ವಿಷಯದ ಬಗ್ಗೆ ಮಾತನಾಡಿ ದರು. ಜನಮೈತ್ರಿ ಬೀಟ್ ಆಫೀಸರ್ ಗೋವಿಂದನ್, ಸಹಾಯ ನೀಡಿದರು. ಪೇಟೆಯಲ್ಲಿ ಟ್ರಾಫಿಕ್ ಪರಿಷ್ಕಾರ, ಆಟೋ ಕಾರ್ಮಿಕರು ಪ್ರಸ್ತುತ ಎದುರಿಸುತ್ತಿರುವ ಸಮಸ್ಯೆಗಳು ಮೊದಲಾ ದವುಗಳನ್ನು ಚರ್ಚಿಸಲಾಯಿತು. ಈ ಬಗ್ಗೆ ಅಧಿಕಾರಿ ಗಳಿಗೆ ತಿಳಿಸಲು ತೀರ್ಮಾನಿಸಲಾಯಿತು.

RELATED NEWS

You cannot copy contents of this page