ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್ ವಾರ್ಷಿಕ ಮಹಾಸಭೆ: ಶೇ. 3 ಲಾಭಾಂಶ ಘೋಷಣೆ

ಬದಿಯಡ್ಕ: ಕುಂಬ್ಡಾಜೆ ಸೇವಾ ಸಹಕಾರಿ ಬ್ಯಾಂಕ್‌ನ  ವಾರ್ಷಿಕ ಮಹಾಸಭೆ ಮವ್ವಾರಿನಲ್ಲಿರುವ  ಪ್ರಧಾನ ಕಚೇರಿಯಲ್ಲಿ ಜರಗಿತು. ಬ್ಯಾಂಕ್‌ನ ಅಧ್ಯಕ್ಷ ಎಂ. ಸಂಜೀವ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸದಸ್ಯರಿಗೆ ಶೇ. 3ಲಾಭಾಂಶವನ್ನು ಅಧ್ಯಕ್ಷರು ಘೋಷಿಸಿದರು. ಕಾರ್ಯದರ್ಶಿ ಮಾಧವ ಶರ್ಮ ಕುರುಮುಜ್ಜಿ ವರದಿ ವಾಚಿಸಿದರು. ಅಸಿಸ್ಟೆಂಟ್ ಸೆಕ್ರೆಟರಿ ಲೋಕೇಶ್ ರೈ ಲೆಕ್ಕಪತ್ರ ಮಂಡಿಸಿದರು. ಬ್ಯಾಂಕ್‌ನ  ಉಪಾಧ್ಯಕ್ಷ ಎಂ. ಶ್ರೀಧರ ಭಟ್ ಸ್ವಾಗತಿಸಿ, ನಿರ್ದೇಶಕ ವೇಣುಗೋಪಾಲ ಕೆ. ವಂದಿಸಿದರು. ನಾರಾಯಣ ಎಂ. ಪ್ರಾರ್ಥನೆ ಹಾಡಿದರು. ನಿರ್ದೇಶಕರಾದ ಜಯಪ್ರಕಾಶ್ ಶೆಟ್ಟಿ, ರಾಮಕೃಷ್ಣ ಭಟ್ ಮವ್ವಾರು, ಹರಿನಾರಾಯಣ ಎಸ್, ಅಣ್ಣಪ್ಪ, ಜಯಂತಿ ರೈ, ಸವಿತ ಕೆ, ಜಯಂತಿ, ಸದಸ್ಯರು ಉಪಸ್ಥಿತರಿದ್ದರು.

RELATED NEWS

You cannot copy contents of this page