ಸಿಬಿಐ ಅಧಿಕಾರಿ ಹೆಸರಲ್ಲಿ 4.13 ಲಕ್ಷ ರೂ. ವಂಚನೆ

ಹೊಸದುರ್ಗ: ಸಿಬಿಐ ಅಧಿಕಾರಿಯೆಂದು  ಪರಿಚಯಿಸಿ ಕೊಡಕ್ಕಾಡ್ ನಿವಾಸಿಯ 4.13 ಲಕ್ಷ ರೂ. ವಂಚಿಸಲಾಗಿದೆ. ಕೊಡಕ್ಕಾಡ್ ವಲಿಯಪೊಯಿಲ್ ನಿವಾಸಿ ಮೊಹಮ್ಮದ್ ಜಾಬಿರ್ (26)ನ  ದೂರಿನಂತೆ ಚೀಮೇನಿ ಪೊಲೀಸರು ಕೇಸು ದಾಖಲಿಸಿದ್ದಾರೆ. ಕಳೆದ ಫೆಬ್ರವರಿ 17ರಂದು ಘಟನೆ ನಡೆದಿದೆ. ಸಿಬಿಐ ಅಧಿಕಾರಿಯೆಂದು ಪರಿಚಯಿಸಿ ಅಪರಿಚಿತ ವ್ಯಕ್ತಿ ಮುಹಮ್ಮದ್ ಜಾಬಿರ್‌ನನ್ನು ಪೋನ್‌ನಲ್ಲಿ ಸಂಪರ್ಕಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ಜಾಬಿರ್‌ನ ಆಧಾರ್ ಕಾರ್ಡ್ ಉಪಯೋಗಿಸಿ ಬ್ಯಾಂಕ್ ಖಾತೆ ಮೂಲಕ ಅನಧಿಕೃತ ಹಣ ವ್ಯವಹಾರ ನಡೆಯುತ್ತಿದೆ ಎಂದು ಫೋನ್ ಕರೆದ ವ್ಯಕ್ತಿ ತಿಳಿಸಿದ್ದನು. ಅಲ್ಲದೆ ಫೋನ್ ಮೂಲಕ ಅಶ್ಲೀಲ ಮೆಸೇಜ್‌ಗಳನ್ನು ಕಳುಹಿಸಿರುವುದಾಗಿಯೂ, ಈ ಬಗ್ಗೆ ಮುಂಬೈ ಅಂಧೇರಿ ಪೊಲೀಸರು ಕೇಸು ದಾಖಲಿಸಿದ್ದಾರೆಂದು ಬೆದರಿಸಿರುವುದಾಗಿಯೂ ದೂರಲಾಗಿದೆ. ಕೂಡಲೇ ಹಣ ನೀಡದಿದ್ದರೆ ವರ್ಚುವಲ್ ಅರೆಸ್ಟ್ ನಡೆಸುವುದಾಗಿ ಬೆದರಿಸಲಾಗಿತ್ತು. ಹಣ ಪಾವತಿಸಿದ ಬಳಿಕವಷ್ಟೇ ತಾನು ವಂಚನೆಯಲ್ಲಿ ಸಿಲುಕಿಕೊಂಡಿರುವುದಾಗಿ ತಿಳಿದು ಬಂದಿರುವುದೆಂದು ದೂರಿನಲ್ಲಿ ಜಾಬಿರ್ ತಿಳಿಸಿದ್ದಾರೆ.

RELATED NEWS

You cannot copy contents of this page