78.10ಶೇ. ಮಂದಿ ರೇಶನ್ ಕಾರ್ಡ್ ಮಸ್ಟರಿಂಗ್


ಕಾಸರಗೋಡು: ಜಿಲ್ಲೆಯಲ್ಲಿ ಇದುವರೆಗೆ ಆದ್ಯತಾರೇಶನ್ ಕಾರ್ಡ್ಗಳಾದ ಹಳದಿ, ಪಿಂಕ್ ಎಂಬಿವುಗಳ ಸದಸ್ಯರ ಮಸ್ಟರಿಂಗ್ ನಡೆಸಿರುವುದು 78.10 ಶೇಕಡಾ ಮಂದಿಯಾಗಿದ್ದಾರೆ. ಮಸ್ಟರಿಂಗ್ಗೆ ನೀಡಿದ ಅಂತಿಮ ಗಡು ನಿನ್ನೆಯಾಗಿತ್ತು. ಒಟ್ಟು ಈ ವಿಭಾಗದ ಕಾರ್ಡ್ ಗಳ ಸದಸ್ಯರಾಗಿರುವ 620212 ಮಂದಿಯಲ್ಲಿ ನಿನ್ನೆ ರಾತ್ರಿ 7 ಗಂಟೆ ವರೆಗೆ 484369 ಮಂದಿ ಮಸ್ಟರಿಂಗ್ ನಡೆಸಿದ್ದಾರೆ ಎಎವೈ(ಹಳದಿ)ಯಲ್ಲಿ 100227, ಪಿಂಕ್ ಕಾರ್ಡ್ನಲ್ಲಿ 384142 ಮಂದಿ ಮಸ್ಟರಿಂಗ್ ಮಾಡಿದ್ದಾರೆ. ಹೊಸದುರ್ಗ ತಾಲೂಕಿನಲ್ಲಿ 175434, ಕಾಸರಗೋಡು ತಾಲೂಕಿನಲ್ಲಿ 141899, ಮಂಜೇಶ್ವರ 92217, ವೆಳ್ಳರಿಕುಂಡ್ 74819 ಮಂದಿ ಮಸ್ಟರಿಂಗ್ ನಡೆಸಿದ್ದಾರೆ. ಇದರಲ್ಲಿ ಮಂಜೇಶ್ವರ ತಾಲೂಕಿನಲ್ಲಿ ಅತೀ ಕಡಿಮೆ ಮಂದಿ ಮಸ್ಟರಿಂಗ್ (ಶೇ.74.44) ಮಾಡಿರುವುದಾಗಿ ಕಂಡುಬAದಿದೆ.

You cannot copy contents of this page