ಕುಂಬ್ಡಾಜೆ: ಪೊಡಿಪ್ಪಳ್ಳ ಶ್ರೀ ಚೀರುಂಬಾ ಭಗವತೀ ಕ್ಷೇತ್ರದ ನವೀಕರಣದಂಗವಾಗಿ ಸಮಾಜ ಪ್ರತಿನಿಧಿಗಳ ಸಂಗಮ ನಡೆಯಿತು. ಕ್ಷೇತ್ರ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ತಂತ್ರಿ ಅಶೋಕ ಅಲೆವೂರಾಯ, ಕ್ಷೇತ್ರ ಮೊಕ್ತೇಸರ ರಾಕಲ್ ಅಡ್ಯಂತಾಯ, ಆಚಾರ ಸ್ಥಾನಿಕ ಅಂಬಾಡಿ ಕಾರ್ನವರ್ ದೀಪ ಬೆಳಗಿಸಿ ಉದ್ಘಾಟಿಸಿದರು. ಆಡಳಿತ ಸಮಿತಿ ಅಧ್ಯಕ್ಷ ವಸಂತನ್ ಚೆಂಬೋಡು ಅಧ್ಯಕ್ಷತೆ ವಹಿಸಿದರು. ಸಂಜೀವ ಶೆಟ್ಟಿ ಮೊಟ್ಟಕುಂಜ ಮಾತನಾಡಿದರು. ಶ್ಯಾಮ್ ಭಟ್ ಏತಡ್ಕ, ಗಂಗಾಧರ ಬಲ್ಲಾಳ್ ಅಡ್ವಳಬೀಡು, ಹರಿನಾರಾಯಣ ಮಾಸ್ತರ್ ಶಿರಂತ್ತಡ್ಕ, ಡಾ| ವೇಣುಗೋಪಾಲ್ ಕಳಯತ್ತೋಡಿ, ಭರತ್ ಶೆಟ್ಟಿ ನೆಕ್ರಾಜೆ, ನ್ಯಾಯವಾದಿ ರಾಮ್ ಪ್ರಸಾದ್ ಶೆಟ್ಟಿ ಬೇರಿಕೆ, ಜ್ಞಾನದೇವ ಶೆಣೈ ಬದಿಯಡ್ಕ, ಎಸ್ಎನ್ ಮಯ್ಯ, ಹರೀಶ್ ಗೋಸಾಡ, ರವೀಂದ್ರ ರೈ ಗೋಸಾಡ, ನರೇಂದ್ರ ಬಿ.ಎನ್, ಸತೀಶ್ ಮಾಸ್ತರ್, ಸುವರ್ಣ ಮಾಸ್ತರ್, ರಾಜಗೋಪಾಲ್ ನವಕಾನ, ಆನಂದ ಕೆ ಮವ್ವಾರು, ರಾಜೇಶ್ ಮಾಸ್ತರ್, ಜಯರಾಮ ನೆಲ್ಲಿಕಳಯ, ನಾರಾಯಣನ್ ನಾಯರ್, ಕುಂಞಿರಾಮನ್ ನೆಕ್ರಾಜೆ, ಸುರೇಂದ್ರ ಪಣಿಕ್ಕರ್, ರಾಮ ಮಾಚಾವು ಸಹಿತ ಹಲವರು ಮಾತನಾಡಿದರು. ಡಾ. ಶ್ರೀಧರ ಏತಡ್ಕ ಸ್ವಾಗತಿಸಿ, ವಿಶ್ವನಾಥ ಬಳ್ಳಪಡವು ನಿರೂಪಿಸಿದರು. ರಾಘವನ್ ಕನಕತ್ತೋಡಿ ವಂದಿಸಿದರು. ವಿವಿಧ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.







