ವಿಮಾನಗಳಿಗೆ ಹುಸಿ ಬಾಂಬ್ ಬೆದರಿಕೆ: ಹತ್ತರಷ್ಟು ಸಾಮಾಜಿಕ ಮಾಧ್ಯಮ ಖಾತೆ ಅಮಾನತು
ನವದೆಹಲಿ: ಈವಾರ ಹಲವಾರು ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ಹುಸಿ ಬಾಂಬ್ ಬೆದರಿಕೆಯೊಡ್ಡಿದ ಹತ್ತರಷ್ಟು ಸಾಮಾಜಿಕ ಮಾಧ್ಯಮಗಳ ಖಾತೆಗಳನ್ನು ಭದ್ರತಾ ಸಂಸ್ಥೆಗಳು ಅಮಾನತುಗೊಳಿಸಿವೆ. ಮಾತ್ರವಲ್ಲ ಹಲವು ಖಾತೆಗಳಿಗೆ ನಿರ್ಬಂಧ ಹೇರಿದೆ.
ಸೈಬರ್, ವಾಯುಯಾನ ಭದ್ರತೆ ಮತ್ತು ಗುಪ್ತಚರ ಸಂಸ್ಥೆಗಳನ್ನು ಒಳಗೊಂಡ ಜಂಟಿ ತಂಡವು ಈ ಖಾತೆಗಳನ್ನು ಕೂಲಂಕುಷವಾಗಿ ವಿಶ್ಲೇಸಿಸಿದೆ. ಮಾತ್ರ ವಲ್ಲ ಅದರ ಆಧಾರದಲ್ಲಿ ಬುದ್ದಿಹೀನ ಬೆದರಿಕೆ ಯೊಡ್ಡಿದ ಕಾರಣದಿಂದ ಅವುಗಳನ್ನು ಅಮಾನತುಗೊಳಿಸುವ ನಿರ್ಧಾರಕ್ಕೆ ಬಂದಿದೆ. ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ಸೇವೆ ನಡೆಸುತ್ತಿರುವ ಭಾರತೀಯ ವಿಮಾನಯಾನ ಸಂಸ್ಥೆಗಳನ್ನು ಗುರಿಯಾಗಿಸಿಕೊಂಡು ಹುಸಿ ಬಾಂಬ್ ಮತ್ತು ಭಯೋತ್ಪಾದಕ ದಾಳಿ ಬೆದರಿಕೆಗಳನ್ನು ಒಡ್ಡಿದ ನಂತರ ಕಳೆದ ಸೋಮವಾರದಿಂದ ಸುಮಾರು ಎಂಟರಷ್ಟು ಸಾಮಾಜಿಕ ಮಾಧ್ಯಮ ಗಳ ಖಾತೆಗಳನ್ನು ಅಮಾನತುಗೊಳಿ ಸಲಾಗಿದೆ ಅಥವಾ ನಿರ್ಬಂಧಿಸಲಾ ಗಿದೆಯೆಂದು ತನಿಖಾ ತಂಡ ತಿಳಿಸಿದೆ.
ಬಾಂಬ್‌ಗಳು, ರಕ್ತವು ಎಲ್ಲೆಡೆ ಚೆಲ್ಲಾಡಲಿದೆ, ಸ್ಪೋಟಕ ಸಾಮಗ್ರಿಗಳು, ಇದು ತಮಾಷೆಯಲ್ಲ, ನೀವೆಲ್ಲರೂ ಸಾಯುತ್ತೀರಿ ಮತ್ತು ಬಾಂಬ್ ರಖ್‌ದಿಯಾ ಹೈ (ಬಾಂಬ್ ಇರಿಸಲಾಗಿದೆ) ಮುಂತಾದ ಪದಗಳನ್ನು ಇಂತಹ ಬಾಂಬ್ ಬೆದರಿಕೆ ಸಂದೇಶಗಳಲ್ಲಿ ಬಳಸಲಾಗುತ್ತಿದೆ ಯೆಂದು ತನಿಖಾ ತಂಡಗಳು ಪತ್ತೆಹಚ್ಚಿವೆ.
ಪ್ರತೀ ಹುಸಿ ಬಾಂಬ್ ಬೆದರಿಕೆಗೆ ಪೊಲೀಸರು ಎಫ್‌ಐಆರ್ ದಾಖಲಿಸುತ್ತಿದ್ದಾರೆ. ಮಾತ್ರವಲ್ಲ ತನಿಖಾ ತಂಡಗಳು, ಸಾಮಾಜಿಕ ಮಾಧ್ಯಮ ಮತ್ತು ಡಾರ್ಕ್ ವೆಬ್‌ಗಳಲ್ಲಿ ಸೈಬರ್ ಗಸ್ತು ಹೆಚ್ಚಿಸಿವೆ. ಇಂತಹ ಎಲ್ಲಾ ಸಾಮಾಜಿಕ ಮಾಧ್ಯಮಗಳ ಬಗ್ಗೆ ತನಿಖಾ ತಂಡ ಸಮಗ್ರ ತನಿಖೆ ಆರಂಭಿಸಿದೆ ಮಾತ್ರವಲ್ಲ ಅವುಗಳ ಹಿಂದಿನ ಮೂಲ ಉದ್ದೇಶ, ಪ್ರೇರಣೆ ಮತ್ತು ಆರ್ಥಿಕ ಇತ್ಯಾದಿ ಸಹಾಯ ಲಭಿಸುವ ಬಗ್ಗೆ ಯೂ ಕೂಲಂಕುಷ ಪರಿಶೀಲನೆಯಲ್ಲೂ ತನಿಖಾ ತಂಡ ತೊಡಗಿದೆ.