ಕಾರು-ಲಾರಿ ಢಿಕ್ಕಿ: ಇಬ್ಬರಿಗೆ ಗಾಯ

ಉಪ್ಪಳ: ಕಾರು-ಲಾರಿ ಢಿಕ್ಕಿ ಹೊಡೆದು ಇಬ್ಬರು ಗಾಯಗೊಂಡ ಘಟನೆ ನಿನ್ನೆ ಬೆಳಿಗ್ಗೆ ಉಪ್ಪಳ ಸರಕಾರಿ ಶಾಲೆ ಬಳಿಯ ರಸ್ತೆಯಲ್ಲಿ  ನಡೆದಿದೆ. ಕಾರಿನಲ್ಲಿ ಸಂಚರಿಸುತ್ತಿದ್ದ ಉಪ್ಪಳ ಬಳಿಯ ಮೂಸೋಡಿ ನಿವಾಸಿಗಳಾದ ರಾಝಿಕ್ ಹಾಗೂ ನಾಝಿಯ ಎಂಬವರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ.  ಕಾಸರಗೋಡು ಭಾಗಕ್ಕೆ ತೆರಳುತ್ತಿದ್ದ ಕಾರು ಹಾಗೂ ಎದುರುಭಾಗದಿಂದ ಆಗಮಿಸಿದ ಲಾರಿ ಢಿಕ್ಕಿ ಹೊಡೆದಿದೆ. ಅಪಘಾ ತದಲ್ಲಿ ಕಾರು ನಜ್ಜುಗುಜ್ಜಾಗಿದೆ.

RELATED NEWS

You cannot copy contents of this page