ಕಂದಾಯ ಜಿಲ್ಲಾ ಶಾಲಾ ಕ್ರೀಡೋತ್ಸವ ಚಿತ್ತಾರಿಕ್ಕಲ್‌ಗೆ ಹ್ಯಾಟ್ರಿಕ್ ಕಿರೀಟ

ಕಾಸರಗೋಡು: ನೀಲೇಶ್ವರದಲ್ಲಿ ನಿನ್ನೆ ಸಮಾಪ್ತಿಗೊಂಡ ಕಾಸರಗೋಡು ಕಂದಾಯ ಜಿಲ್ಲಾ ಶಾಲಾ ಕ್ರೀಡೋ ತ್ಸವದಲ್ಲಿ 27 ಚಿನ್ನ, 14 ಬೆಳ್ಳಿ, 13 ಕಂಚಿನ ಪದಕ ಪಡೆದು 204 ಅಂಕ ಗಳೊಂದಿಗೆ ಚಿತ್ತಾರಿಕ್ಕಲ್ ಶಿಕ್ಷಣ ಉಪಜಿಲ್ಲೆ ಸರ್ವಾಂಗೀಣ ಪ್ರಶಸ್ತಿ ಗೆದ್ದುಕೊಂಡಿದೆ. ಚಿತ್ತಾರಿಕ್ಕಲ್ ಈ ಪ್ರಶಶ್ತಿ ಗೆದ್ದುಕೊಳ್ಳುತ್ತಿರುವುದು ಇದು ಸತತ ಮೂರನೇ ಬಾರಿಯಾಗಿದೆ. 167 ಅಂಕಗಳೊAದಿಗೆ 19 ಚಿನ್ನ, 19 ಬೆಳ್ಳಿ, 10 ಕಂಚಿನ ಪದಕ ಪಡೆದ ಚೆರುವತ್ತೂರು ದ್ವಿತೀಯ ಹಾಗೂ 146 ಅಂಕಗಳೊAದಿಗೆ ಕಾಸರಗೋ ಡು ಶಿಕ್ಷಣ ಉಪಜಿಲ್ಲೆ ಮೂರನೇ ಸ್ಥಾನ ಪಡೆದಿದೆ. 126 ಅಂಕ ಪಡೆದ ಹೊಸದುರ್ಗ, 88 ಅಂಕದೊAದಿಗೆ ಮಂಜೇಶ್ವರ ಉಪಜಿಲ್ಲೆಗಳು ಕ್ರಮವಾಗಿ ನಂತರದ ಸ್ಥಾನ ಪಡೆದುಕೊಂಡಿದೆ. ಶಾಸಕ ಸಿ.ಎಚ್. ಕುಂಞAಬು ಪ್ರಶಸ್ತಿ ವಿತರಿಸಿದರು.

RELATED NEWS

You cannot copy contents of this page