ಕೋಟಿ ಪಂಚಾಕ್ಷರಿ ಜಪ ಯಜ್ಞ ಆಮಂತ್ರಣ ಪತ್ರಿಕೆ ಬಿಡುಗಡೆ

ಕಾಸರಗೋಡು: ಶ್ರೀ ಮಲ್ಲಿ ಕಾರ್ಜುನ ಕ್ಷೇತ್ರ ರಾಜಾಂಗಣದಲ್ಲಿ  ಡಿಸೆಂಬರ್ 16ರಿಂದ ನಡೆಯಲಿರುವ ಕೋಟಿ ಪಂಚಾಕ್ಷರಿ ಜಪ ಯಜ್ಞದ ಆಮಂತ್ರಣ ಪತ್ರಿಕೆಯನ್ನು ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಬಿಡು ಗಡೆಗೊಳಿಸಿದರು. ತಂತ್ರಿವರ್ಯ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿ ಉಪಸ್ಥಿತರಿದ್ದರು. ಡಾ| ಅನಂತ ಕಾಮತ್ ಅಧ್ಯಕ್ಷತೆ ವಹಿಸಿದರು. ಉದ್ಯಮಿ ರಾಮ್‌ಪ್ರಸಾದ್, ಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ಟಿ. ರಾಜೇಶ್, ನ್ಯಾಯವಾದಿ ಗೋವಿಂದನ್ ನಾಯರ್, ಯಜ್ಞ ಸಮಿತಿ ಉಪಾಧ್ಯಕ್ಷೆ ಮೀರಾ ಕಾಮತ್, ಕಾರ್ಯಾಧ್ಯಕ್ಷ ಕೆ.ಎನ್. ವೆಂಕಟ್ರಮಣ ಹೊಳ್ಳ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್, ದೇವದಾಸ ನುಳ್ಳಿಪ್ಪಾಡಿ ಉಪಸ್ಥಿತರಿದ್ದರು. ಶ್ರೀ ವೆಂಕಟ್ರಮಣ ಬಾಲಗೋಕುಲ ಮಕ್ಕಳು ಪ್ರಾರ್ಥನೆ ಹಾಡಿದರು.

You cannot copy contents of this page