ಚಿನ್ಮಯಾನಂದಜಿ ಜನ್ಮ ಶತಾಬ್ದಿ: ವಸತಿ ದಾನ ಯೋಜನೆಯ 8ನೇ ಮನೆ ನಾಳೆ ಹಸ್ತಾಂತರ

ವಿದ್ಯಾನಗರ: ಸ್ವಾಮಿ ಚಿನ್ಮಯಾ ನಂದಜಿ ಜನ್ಮಶತಾಬ್ದಿಯಂ ಗವಾಗಿ ರೂಪಿಸಿದ ‘ಮನೆ ಇಲ್ಲದವರಿಗೆ ಮನೆ’ ವಸತಿದಾನ ಯೋಜನೆಯಲ್ಲಿ ನಿರ್ಮಾಣಪೂರ್ತಿಯಾದ ೮ನೇ ಮನೆಯ ಕೀಲಿಕೈ ಹಸ್ತಾಂತರ ನಾಳೆ ಬೆಳಿಗ್ಗೆ 10 ಗಂಟೆಗೆ ಸಂಸದ  ರಾಜ್ ಮೋಹನ್ ಉಣ್ಣಿತ್ತಾನ್ ನಿರ್ವಹಿ ಸುವರು. ಗಣೇಶ್ ಮೊಗ್ರಾಲ್‌ಗೆ ಇವರು ಕೀಲಿಕೈ ಹಸ್ತಾಂತರಿಸುವರು. ಚಿನ್ಮಯ ತೇಜಸ್ ಸಭಾಂಗಣದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಚಿನ್ಮಯ ಮಿಷನ್ ಅಧ್ಯಕ್ಷ ಎ.ಕೆ. ನಾಯರ್ ಅಧ್ಯಕ್ಷತೆ ವಹಿಸುವರು.

ಸ್ವಾಮಿ ವಿವಿಕ್ತಾನಂದ ಸರಸ್ವತಿ ಆಶೀರ್ವಚನ ನೀಡುವರು. ಬ್ರಹ್ಮಚಾರಿಣಿ ದಿಶಾ ಚೈತನ್ಯ,  ಬಿ. ಪ್ರಶಾಂತ್ ಕುಮಾರ್ ಭಾಗವಹಿಸುವರು. ಇದೇ ವೇಳೆ ವಸತಿದಾನ ಯೋಜನೆಗೆ ಕೊಡುಗೆ ನೀಡಿದ ಇಂದಿರಾ ರಾಧಾಕೃಷ್ಣನ್, ಕಾಂಟ್ರಾಕ್ಟರ್ ದಿನೇಶ್ ನಾಯಕ್‌ರನ್ನು ಗೌರವಿಸಲಾಗುವುದು. ಕೆ. ಬಾಲಚಂದ್ರನ್, ಕೆ.ಸಿ. ಸುನಿಲ್ ಕುಮಾರ್ ಉಪಸ್ಥಿತರಿರುವರು.

RELATED NEWS

You cannot copy contents of this page