ಎಡನೀರು ಶ್ರೀಗಳ ಕಾರಿಗೆ ಹಾನಿ: ಐಲದಲ್ಲಿ ಪ್ರತಿಭಟನೆ

ಉಪ್ಪಳ: ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಯವರ ಕಾರಿಗೆ ಕಿಡಿಗೇಡಿಗಳು ನಡೆಸಿದ ದಾಳಿಯನ್ನು ಪ್ರತಿಭಟಿಸಿ ಐಲದಲ್ಲಿ ಸಭೆ ಜರಗಿತು. ಈ ಘಟನೆಯನ್ನು ಎಲ್ಲರೂ ಒಕ್ಕೊರಲಿನಿಂದ ಜಾತಿ ಬೇಧ, ಪಕ್ಷ ಬಿಟ್ಟು ವಿರೋಧಿಸಬೇಕೆಂದು, ಘಟನೆಗೆ ಕಾರಣಕರ್ತರಾದ ಆರೋಪಿಗಳನ್ನು ಕೂಡಲೇ ಬಂಧಿಸಬೇಕೆಂದು ರವೀಶ ತಂತ್ರಿ ಆಗ್ರಹಿಸಿದರು. ವಿಶ್ವಹಿಂದೂ ಪರಿಷತ್ ಕರ್ನಾಟಕ ಪ್ರಾಂತ್ಯದ ಪ್ರೊ. ಎಂ.ಬಿ. ಪುರಾಣಿಕ್ ಮಾತನಾಡಿದರು. ಐಲ ಕ್ಷೇತ್ರದ ಆಡಳಿತ ಮುಕ್ತೇಸರ ಕೊಡಿಬೈಲು ನಾರಾಯಣ ಹೆಗ್ಡೆ ಅಧ್ಯಕ್ಷತೆ ವಹಿಸಿದರು. ಹಿಂದೂ ಐಕ್ಯವೇದಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜನ್ ಮುಳಿಯಾರ್, ಮುಖಂಡರಾದ ಡಾ. ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ವೀರಪ್ಪ ಅಂಬಾರ್, ಗೋಪಾಲ ಶೆಟ್ಟಿ ಅರಿಬೈಲು, ಹರಿನಾಥ ಭಂಡಾರಿ ಮುಳಿಂಜ ಮೊದಲಾದವರು ಘಟನೆಯನ್ನು ಖಂಡಿಸಿ ಮಾತನಾಡಿದರು. ಸೇವಾ ಸಮಿತಿ ಅಧ್ಯಕ್ಷ ಲಕ್ಷ್ಮಣ ಕುಂಬಳೆ ಸ್ವಾಗತಿಸಿ, ಉಪಾಧ್ಯಕ್ಷ ವಸಂತ ಕುಮಾರ್ ಮಯ್ಯ ವಂದಿಸಿದರು. ಕಮಲಾಕ್ಷ ಐಲ ನಿರೂಪಿಸಿದರು

RELATED NEWS

You cannot copy contents of this page