ಮಹಾರಾಷ್ಟ್ರ, ಝಾರ್ಖಂಡ್ ವಿಧಾನಸಭೆ: ಮತದಾನ ಶಾಂತಿಯುತ
ನವದೆಹಲಿ: ಮಹಾರಾಷ್ಟ್ರ ಮತ್ತು ಝಾರ್ಖಂಡ್ ವಿಧಾನಸಭೆಗಳ ಚುನಾವಣೆ ಜೊತೆಗೆ ಕೇರಳದ ಪಾಲಕ್ಕಾಡ್ ಸೇರಿದಂತೆ ನಾಲ್ಕು ರಾಜ್ಯಗಳ ಒಟ್ಟು 15 ವಿಧಾನಸಭೆಗ ಳಿಗೆ ಉಪಚುನಾವಣೆಗಾಗಿರುವ ಮತದಾನ ಇಂದು ಬೆಳಿಗ್ಗೆ ಆರಂಭಗೊಂಡಿದೆ. ಈತನಕ ಎಲ್ಲೆಡೆ ಶಾಂತಿಯುತವಾಗಿ ಮತದಾನ ಮುಂದುವರಿದಿದೆ.
ಮಹಾರಾಷ್ಟ್ರದ ಒಟ್ಟು 288 ವಿಧಾನಸಭಾ ಕ್ಷೇತ್ರಗಳಿಗೆ ಹಾಗೂ ಝಾರ್ಖಂಡ್ನ 38 ವಿಧಾನಸಭೆ ಸ್ಥಾನಗಳಿಗೆ ಎರಡನೇ ಹಾಗೂ ಅಂತಿಮ ಹಂತದ ಮತದಾನ ಇಂದು ಬೆಳಿಗ್ಗೆ 7 ಗಂಟೆಗೆ ಆರಭಗೊಂಡಿದೆ. ಮತದಾನ ಶಾಂತಿಯುತವಾಗಿ ಮುಂದುವರಿಯುತ್ತಿದೆ.
ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಮಹಾಯತಿ ಮೈತ್ರಿಕೂಟ (ಬಿಜೆಪಿ-ಶಿವಸೇನೆ-ಎನ್ಸಿಪಿ) ತನ್ನ ಅಧಿಕಾರ ಉಳಿಸಿಕೊಳ್ಳಲು ಪೈಪೋಟಿ ನಡೆಸುತ್ತಿದ್ದರೆ ಪ್ರತಿಪಕ್ಷದ ಮಹಾ ವಿಕಾಸ್ ಆಘಾಡಿ (ಕಾಂಗೆಸ್-ಶಿವಸೇನೆ -ಎನ್ಸಿಪಿ ಎಸ್ಪಿ ಅಧಿಕ ಸೀಟುಗಳನ್ನು ಗೆದ್ದು ಮತ್ತೆ ಅಧಿಕಾರಕ್ಕೇರುವ ನಿರೀಕ್ಷೆಯಲ್ಲಿದೆ. ಮತದಾನ ಸಂಜೆ 6 ಗಂಟೆ ಗೆ ಮುಕ್ತಾ ಯವಾಗಲಿದೆ.
ಝಾರ್ಖಂಡ್ನಲ್ಲಿ ದ್ವಿತೀಯ ಹಂತದಲ್ಲಿ ಬಿಗಿ ಭದ್ರತೆ ಯೊಂದಿಗೆ ಇಂದು 38 ಕ್ಷೇತ್ರಗಳಿಗೆ ಮತದಾನ ನಡೆಯುತ್ತಿದೆ. ಇಲ್ಲಿ ಆಡಳಿತಾರೂಢ ಜೆಎಂಎಂ ನೇತೃತ್ವ ದ ಇಂಡಿಯಾ ಬ್ಲೋಕ್ ಮೈತ್ರಿಕೂಟ ತನ್ನ ಅಧಿಕಾರ ಉಳಿಸಿಕೊಳ್ಳುವ ಹೋರಾಟ ನಡೆಸುತ್ತಿದ್ದರೆ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರ ಕಸಿದುಕೊಳ್ಳಲು ಪ್ರಯತ್ನಿಸುತ್ತಿದೆ. ಝಾರ್ಖಂಡ್ನಲ್ಲಿ ನ. 13ರಂದು ಪ್ರಥಮ ಹಂತದ ಮತದಾನ ನಡೆದಿತ್ತು. ಮತ ಎಣಿಕೆ ನವಂಬರ್ 23ರಂದು ನಡೆಯಲಿದೆ.
ಇದೇ ಸಂದರ್ಭದಲ್ಲಿ ಚುನಾವಣೆಯ ವಿವಿಧ ಸಂಸ್ಥೆಗಳ ಎಕ್ಸಿಟ್ ಪೋಲ್ ಇಂದು ಪ್ರಕಟಗೊಳ್ಳಲಿದೆ.