ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಸಮಾರೋಪ ಇಂದು

ಉಪ್ಪಳ: ಮಂಗಲ್ಪಾಡಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿರುವ ಮಂಜೇಶ್ವರ ಉಪಜಿಲ್ಲಾ ಶಾಲಾ ಕಲೋತ್ಸವ ಇಂದು ಸಂಜೆ 4 ಗಂಟೆಗೆ ಸಮಾಪ್ತಿಗೊಳ್ಳಲಿದೆ. ಸಂಸದ ರಾಜ್‌ಮೋಹನ್ ಉಣ್ಣಿತ್ತಾನ್ ಉದ್ಘಾಟಿಸುವರು. ಬ್ಲೋಕ್ ಪಂಚಾಯತ್ ಅಧ್ಯಕ್ಷೆ ಸಮೀನ ಟೀಚರ್ ಅಧ್ಯಕ್ಷತೆ ವಹಿಸುವರು. ಹಲವು ಗಣ್ಯರು ಭಾಗವಹಿಸುವರು. ಮಂಗಲ್ಪಾಡಿ ಶಾಲೆ ಅಲ್ಲದೆ ಐಲ ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಭಾಂಗಣ, ನಯಬಜಾರ್ ಲಯನ್ಸ್ ಸೇವಾ ಮಂದಿರ, ಐಲ ಶ್ರೀ ಶಾರದಾ ಬೋವಿ ಶಾಲೆ, ಎ.ಜೆ.ಐ ಶಾಲೆಗಳಲ್ಲಿ ವಿವಿಧ ಸ್ಪರ್ಧೆಗಳು ನಡೆಯುತ್ತಿದೆ.

RELATED NEWS

You cannot copy contents of this page