ಜ್ಯುವೆಲ್ಲರಿ ಮಾಲಕನಿಗೆ ಆಕ್ರಮಿಸಿ ಚಿನ್ನಾಭರಣ ದೋಚಿದ ನಾಲ್ವರ ಸೆರೆ

ಮಲಪ್ಪುರಂ: ಪೆರಿಂದಲ್ ಮಣ್ಣದಲ್ಲಿ ಸ್ಕೂಟರ್‌ನಲ್ಲಿ ಸಂಚರಿ ಸುತ್ತಿದ್ದ ಜ್ಯುವೆಲ್ಲರಿ  ಮಾಲಕನನ್ನು ಆಕ್ರಮಿಸಿ ಮೂರೂವರೆ ಕಿಲೋ ಚಿನ್ನ ದೋಚಿದ ಪ್ರಕರಣದಲ್ಲಿ ನಾಲ್ಕು ಮಂದಿಯನ್ನು ಸೆರೆಹಿಡಿಯಲಾಗಿದೆ.  ಕಣ್ಣೂರು ನಿವಾಸಿಗಳಾದ  ಪ್ರಬಿನ್ ಲಾಲ್, ಲಿಜಿನ್ ರಾಜನ್, ತೃಶೂರು ವರಂದರಪ್ಪಳ್ಳಿ ನಿವಾಸಿಗಳಾದ ಸತೀ ಶನ್, ನಿಖಿಲ್ ಎಂಬಿವರು ಬಂಧಿತ ಆರೋಪಿಗಳಾಗಿದ್ದಾರೆಂದು ತಿಳಿದು ಬಂದಿದೆ.  ಇನ್ನೂ ಐದು ಮಂದಿ ಈ ಕಳವು ತಂಡದಲ್ಲಿದ್ದಾ ರೆಂದು ಮಾಹಿತಿಯಿದೆ.  ಸ್ಕೂಟರ್ ನಲ್ಲಿ ತೆರಳುತ್ತಿದ್ದ ಜ್ಯುವೆಲ್ಲರಿ ಮಾಲಕ ಯೂಸಫ್ ಹಾಗೂ ಸಹೋದರ ಶಾನವಾಸ್‌ರನ್ನು ಕಾರಿನಲ್ಲಿ ಹಿಂಬಾ ಲಿಸಿ ಬಂದ ತಂಡ  ಅವರ ಮೇಲೆ ದಾಳಿ ನಡೆಸಿ ಚಿನ್ನಾಭರಣ  ದೋಚಿತ್ತು.

You cannot copy contents of this page