ಕಣ್ಣೂರು ನಿವಾಸಿ ನರ್ಸಿಂಗ್ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ

ಬೆಂಗಳೂರು: ಕೇರಳೀಯ ಳಾದ ನರ್ಸಿಂಗ್ ವಿದ್ಯಾರ್ಥಿನಿ ಬೆಂಗಳೂರಿನಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ರಾಮ್‌ನಗರದ ಡಾ| ಚಂದ್ರಮ್ಮ ದಯಾನಂದ ಸಾಗರ್ ಕಾಲೇಜಿನ ಪ್ರಥಮ ವರ್ಷ ಬಿಎಸ್‌ಸಿ ವಿದ್ಯಾರ್ಥಿನಿ ಅನಾಮಿಕ (19) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚ ಲಾಗಿದೆ. ಕಣ್ಣೂರು ನಿವಾಸಿಯಾದ ಈಕೆ ಹಾಸ್ಟೆಲ್ ಕೊಠಡಿಯಲ್ಲಿ ಮಂಗಳವಾರ ರಾತ್ರಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಹಚ್ಚಲಾಗಿದೆ. ರಾತ್ರಿಯ ಊಟಕ್ಕೆ ತಲುಪದ ಹಿನ್ನೆಲೆಯಲ್ಲಿ ಸಹಪಾಠಿಗಳು ಕೊಠಡಿಗೆ ತೆರಳಿ ಬಾಗಿಲು ತಟ್ಟಿದರಾದರೂ ಪ್ರತಿಕ್ರಿಯೆ ಉಂಟಾಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಬಾಗಿಲು ತೆರೆದು ಒಳ ಪ್ರವೇಶಿಸಿದಾಗ ವಿದ್ಯಾರ್ಥಿನಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾಳೆ.

ಅನಾಮಿಕ ಆತ್ಮಹತ್ಯೆಗೈಯ್ಯಲು ಕಾರಣ ಕಾಲೇಜ್ ಮೆನೇಜ್‌ಮೆಂಟ್‌ನ ಕಠಿಣ ನಿಲುವು ಎಂದು ಕುಟುಂಬ ಸದಸ್ಯರು ದೂರಿದ್ದು, ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದಾರೆ. ಘಟನೆಯಲ್ಲಿ ಪೊಲೀಸರು ಕೇಸು ದಾಖಲಿಸಿ ತನಿಖೆ ಆರಂಭಿಸಿದ್ದಾರೆ.

You cannot copy contents of this page