ಕಾಸರಗೋಡು: ಸಣ್ಣ ವ್ಯಾಪಾರ ವಲಯದಲ್ಲಿ ಬಹುರಾಷ್ಟ್ರ ಕಂಪೆನಿಗಳ ನುಸುಳುವಿಕೆ ಹಾಗೂ ಆನ್ಲೈನ್ ವ್ಯಾಪಾರ ಸಹಿತ ಕೇರಳದ ವ್ಯಾಪಾರಿ ಗಳು ಇಂದು ಎದುರಿಸುತ್ತಿರುವ ಸಂದಿ ಗ್ಧತೆಗಳು ಬಹಳವಾಗಿದ್ದು, ಸಣ್ಣ ವ್ಯಾಪಾರಿಗಳು ನೆಲೆ ನಿಲ್ಲಲು ಕೇರಳದಲ್ಲಿ ವ್ಯಾಪಾರ ನೀತಿ ಉಂಟಾಗಬೇಕೆಂದು ಕೇರಳ ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಜಿಲ್ಲಾ ಕೌನ್ಸಿಲ್ ಸಭೆ ಆಗ್ರಹಿಸಿದೆ. ಈ ರೀತಿಯ ಸವಾಲುಗಳನ್ನು ಎದುರಿಸಲು ಬೇಕಾದ ಅಧ್ಯಯನ ಗಳನ್ನು ನಡೆಸಲು, ಸಣ್ಣ ವ್ಯಾಪಾರಿ ಗಳಿಗೆ ಆಧುನಿಕ ಮೆನೇಜ್ ಮೆಂಟ್ ತಿಳುವಳಿಕೆ ನೀಡುವುದಕ್ಕೆ ಈ ವಲಯದ ತಜ್ಞರನ್ನು, ಸಂಶೋಧ ಕರನ್ನು ಸೇರಿಸಿಕೊಂಡು ತಿರುವನಂತ ಪುರದಲ್ಲಿ ವ್ಯಾಪಾರ ಅಧ್ಯಯನ ಕೇಂದ್ರ ಆರಂಭಿ ಸಲಾಗುವುದು. ಇದರ ಮುಂಚಿತವಾಗಿ ಈ ತಿಂಗಳ ೨೪ರಂದು ಕೇರಳ ರೀಟೈಲ್ ಕಾನ್ಕ್ಲೇವ್ ತಿರುವನಂತಪುರ ದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಉದ್ಘಾಟಿಸುವರು. ಎರಡು ದಿನಗಳಲ್ಲಾಗಿ ನಡೆಯುವ ಕಾರ್ಯ ಕ್ರಮದಲ್ಲಿ ತಜ್ಞರು ಕೇರಳದ ಕಿರು ವ್ಯಾಪಾರಿ ವಲಯಗಳ ಬಗ್ಗೆ ಪ್ರಬಂಧ ಮಂಡಿಸುವರು.
ಈ ಬಗ್ಗೆ ನಡೆದ ಸಭ ಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಕೆ. ಅಹ ಮ್ಮದ್ ಶರೀಫ್ ಅಧ್ಯಕ್ಷತೆ ವಹಿಸಿದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕೆ.ಜೆ. ಸಜಿ ಸ್ವಾಗತಿಸಿ ದರು. ರಾಜ್ಯ ಕಾರ್ಯದರ್ಶಿ ಬಾಬು ಕೋಟ್ಟಯಿಲ್ ಉದ್ಘಾಟಿಸಿದರು. ರಾಜ್ಯ ಕಾರ್ಯದರ್ಶಿ ಬಾಪು ಹಾಜಿ, ಜಿಲ್ಲಾ ಉಪಾಧ್ಯಕ್ಷ ಪಿ.ಸಿ. ಮುಸ್ತಫ, ಎ.ಎ. ಅಸೀಸ್, ಥೋಮಸ್ ಕಾನಾಟ್, ಸಿ. ಹಂಸ ಪಾಲಕ್ಕಿ, ಜಿಲ್ಲಾ ಕೋಶಾಧಿಕಾರಿ ಮಾಹಿನ್ ಕೋಳಿಕ್ಕರ, ವನಿತಾ ವಿಂಗ್ ಜಿಲ್ಲಾಧ್ಯಕ್ಷೆ ರೇಖಾ ಮೋಹನ್ದಾಸ್ ಮಾತನಾಡಿದರು.