ಕಾಡಾನೆ ತುಳಿತಕ್ಕೆ ಓರ್ವ ಬಲಿ: ಜನರು ಭೀತಿಯಲ್ಲಿ

ಕಣ್ಣೂರು: ಕಣ್ಣೂರಿಗೆ ಸಮೀಪದ ಉಳಿಕ್ಕಲ್‌ನಲ್ಲಿ ಕಾಡಿನಿಂದ ಊರಿಗೆ ಇಳಿದು ಭೀತಿ ಸೃಷ್ಟಿಸಿರುವ ಕಾಡಾನೆ ಯೊಂದು ಜನರ ಮೇಲೆರಗತೊಡಗಿದ್ದು, ಅದರ ತುಳಿತಕ್ಕೆ ಒಳಗಾಗಿ ಓರ್ವರು ದಾರುಣವಾಗಿ ಸಾವನ್ನಪ್ಪಿದ್ದಾರೆ.

ಮೃತರನ್ನು ಉಳಿಕ್ಕಲ್ ನೆಲ್ಲಿಕಾಂ ಪೊಯಿಲ್ ನಿವಾಸಿ ಆ ದೃಶ್ಶೇರಿ ಜೋಸ್ ಎಂದು ಗುರುತಿಸಲಾಗಿದೆ. ಇವರ ಮೃತದೇಹ ಅಲ್ಲೇ ಪಕ್ಕದ ಇಗರ್ಜಿಯೊಂದರ ಹಿತ್ತಿಲಲ್ಲಿ ಇಂದು ಬೆಳಿಗ್ಗೆ ಪತ್ತೆಯಾಗಿದೆ. ಶರೀರವಿಡೀ ನುಚ್ಚುನೂರಾಗಿ ಕೈ ಬೇರ್ಪಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಕಾಡಾನೆ ಹಾವಳಿ ಪ್ರದೇಶದಲ್ಲಿ ಜೋಸ್‌ರನ್ನು ಆ ಪರಿಸರದ ಓರ್ವರು ನಿನ್ನೆ ಕಂಡಿದ್ದರು.  ಅಲ್ಲಿ ಕಾಡಾನೆ ಇದೆ. ಆದ್ದರಿಂದ ಇಲ್ಲಿಂದ ತಕ್ಷಣ ತಪ್ಪಿಸಿಕೋ ಎಂದು ಆ ವ್ಯಕ್ತಿ ಜೋಸ್‌ಗೆ ಮುನ್ನೆಚ್ಚರಿಕೆಯನ್ನು ನೀಡಿದ್ದರು. ಅದಾದ ಬಳಿಕ ಜೋಸ್‌ರ ಮೃತದೇಹ ಇಂದು ಬೆಳಿಗ್ಗೆ ಆ ಪರಿಸರದಲ್ಲೇ ಪತ್ತೆಯಾಗಿದೆ. ವಿಷಯ ತಿಳಿದ ಅರಣ್ಯ ಪಾಲಕರು ಸ್ಥಳಕ್ಕೆ ಆಗಮಿಸಿ ಆನೆಯನ್ನು ಪತ್ತೆಹಚ್ಚಿ ಅದನ್ನು ಕಾಡಿಗೆ ಅಟ್ಟುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಇದು ಕರ್ನಾಟಕ ಅರಣ್ಯ ವಲಯದಿಂದ ೧೨ ಕಿಲೋ ಮೀಟರ್ ದೂರವಿರುವ ಪ್ರದೇಶವಾಗಿದೆ. ಈ ಪ್ರದೇಶದಲ್ಲಿ ಕಾಡಾನೆ ಹಾವಳಿ ಇತ್ತೀಚೆಗಿನಿಂದ ಸಾಮಾನ್ಯವಾ ಗಿಬಿಟ್ಟಿದೆ. ಇದರಿಂದ ಈ ಪ್ರದೇಶದ ಜನರು ಭೀತಿಯಿಂದ ದಿನ ಕಳೆಯಬೇಕಾದ ಸ್ಥಿತಿ ಉಂಟಾಗಿದೆ.

Leave a Reply

Your email address will not be published. Required fields are marked *

You cannot copy content of this page