ಪ್ರಿಯತಮೆ ಜೊತೆ ವಶಕ್ಕೆ ತೆಗೆದ ಯುವಕ ಪೊಲೀಸ್ ಠಾಣೆಯೊಳಗೆ ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆ

ವಯನಾಡು: ಪ್ರಿಯತಮೆ ಜೊತೆ ಪೊಲೀಸರು ವಶಕ್ಕೆ ತೆಗೆದುಕೊಂಡ ಯುವಕ ಬಳಿಕ ಪೊಲೀಸ್ ಠಾಣೆಯ ಶೌಚಾಲ ಯದೊಳಗೆ ನೇಣುಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ನಡೆದಿದೆ. ವಯನಾಡು ಅಂಬಲವಯಲ್ ನಿವಾಸಿ ಗೋಕುಲ್ (26) ಸಾವನ್ನಪ್ಪಿದ ಯುವಕ.  ಮಾರ್ಚ್ 26ರಂದು ಕಲ್ಪೆಟ್ಟ ನಿವಾಸಿಯಾಗಿರುವ ಯುವತಿಯೋರ್ವೆ ನಾಪತ್ತೆಯಾ ಗಿದ್ದಳು. ಆ ಬಗ್ಗೆ ಪೊಲೀಸರು ಮಿಸ್ಸಿಂಗ್ ಪ್ರಕರಣ ದಾಖಲಿಸಿ ನಡೆಸಿದ ಶೋಧ ಕಾರ್ಯಾಚರ ಣೆಯಲ್ಲಿ ಆ ಯುವತಿಯನ್ನು ಕಲ್ಲಿಕೋಟೆಯಿಂದ ಪತ್ತೆಹಚ್ಚಿದ್ದರು. ಆಗ ಆಕೆಯ  ಪ್ರಿಯತಮನಾದ ಗೋಕುಲ್‌ನನ್ನೂ ಪೊಲೀಸರು ವಶಕ್ಕೆ  ತೆಗೆದುಕೊಂಡು ಇಬ್ಬರನ್ನು ಪೊಲೀಸ್ ಠಾಣೆಗೆ  ಸಾಗಿಸಿದರು. ನಂತರ ಆ ಯುವತಿಯನ್ನು ಪೊಲೀಸರು ಆಕೆಯ ಮನೆಯವರ ಜೊತೆ ಕಳುಹಿಸಿಕೊಟ್ಟಿದ್ದರು. ಆದರೆ ಗೋಕುಲ್‌ನನ್ನು ಬಿಡುಗಡೆಗೊಳಿಸದೆ   ಪೊಲೀಸರು ಆತನನ್ನು ಪೊಲೀಸ್ ಠಾಣೆಯಲ್ಲೇ ಇರಿಸಿದ್ದರು. ಈ ಮಧ್ಯೆ ಗೋಕುಲ್ ಶೌಚಾಲಯಕ್ಕೆ  ಹೋಗಬೇಕೆಂದು ತಿಳಿಸಿ ಶೌಚಾಲಯದೊಳಗೆ ಪ್ರವೇಶಿಸಿದ್ದನು. ತಡವಾದರೂ ಆತ ಹೊರಗೆ ಬಾರದೇ ಇರುವುದನ್ನು ಗಮನಿಸಿದ ಪೊಲೀಸರು ನಂತರ ಪರಿಶೀಲಿಸಿದಾಗ ಗೋಕುಲ್ ನೇಣು ಬಿಗಿದು ಸಾವನ್ನಪ್ಪಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾನ. ಮೃತದೇಹವನ್ನು ನಂತರ ಕಲ್ಪೆಟ್ಟಾದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು. ಸಾವಿಗೆ ಕಾರಣವೇನೆಂದು ಇನ್ನೂ ಸ್ಪಷ್ಟಗೊಂಡಿಲ್ಲ.

RELATED NEWS

You cannot copy contents of this page