ನೌಕಾ ಪಡೆಯ ಕಾರ್ಯಾಚರಣೆ: 2507 ಕಿಲೋ ಗ್ರಾಂ ಮಾದಕವಸ್ತು ಪತ್ತೆ

ಕೊಚ್ಚಿ: ಭಾರತೀಯ ನೌಕಾಪಡೆ ಸಮುದ್ರದಲ್ಲಿ ನಡೆಸಿದ ಕಾರ್ಯಾಚರ ಣೆಯಲ್ಲಿ ಬೋಟುಗಳ ಮೂಲಕ ವಿದೇಶದಿಂದ ಭಾರತಕ್ಕೆ ಸಾಗಿಸುತ್ತಿದ್ದ 2507 ಕಿಲೋ ಗ್ರಾಂ ಮಾದಕವಸ್ತು ಪತ್ತೆಹಚ್ಚಿ ವಶಪಡಿಸಿಕೊಂಡಿದೆ. ವಶಪಡಿಸಿದ ಈ ಅಮಲು ಪದಾರ್ಥ ಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆ ಯಲ್ಲಿ ಕೋಟ್ಯಂತರ ರೂ. ಬೆಲೆ ಹೊಂದಿದೆ.
ವಶಪಡಿಸಲಾದ ಮಾಲಿನಲ್ಲಿ 2386 ಕಿಲೋ ಹ್ಯಾಶಿಶ್ ಮತ್ತು 121 ಕಿಲೋ ಹೆರೋಯ್ನ್ ಒಳಗೊಂಡಿದೆ. ಹೆರೋಯ್ನ್ಗೆ ಕಿಲೋವೊಂದಕ್ಕೆ ಐದು ಕೋಟಿ ರೂ. ಬೆಲೆ ಹಾಗೂ ಹ್ಯಾಶಿಶ್ ಆಯಿಲ್ಗೆ ಕಿಲೋವೊಂದಕ್ಕೆ 10ರಿಂದ 15 ಲಕ್ಷ ರೂ. ತನಕ ಬೆಲೆ ಇದೆ.
ಭಾರತೀಯ ನೌಕಾಪಡೆಯ ಯುದ್ಧ ಹಡಗು ಆಗಿರುವ ಐಎನ್ಎಸ್ನಲ್ಲಿ ಭಾರತೀಯ ನೌಕಾಪಡೆ ಹಿಂದೂ ಮಹಾಸಾಗರ ಮತ್ತು ಅರಬಿ ಸಮುದ್ರದಲ್ಲಿ ನಡೆಸಿದ ಈಕಾರ್ಯಾಚರಣೆ ನಡೆಸಿದ್ದು, ಅದರಂತೆ ಶಂಕಾಸ್ಪದ ರೀತಿಯಲ್ಲಿ ಭಾರತದತ್ತ ಬರುತ್ತಿದ್ದ ಬೋಟ್ಗಳನ್ನು ತಡೆದು ನಿಲ್ಲಿಸಿ ಅದನ್ನು ತಪಾಸಣೆಗೊಳಪಡಿಸಿದಾಗ ಅದರಲ್ಲಿ ಈ ಮಾದಕವಸ್ತುಗಳು ಪತ್ತೆಯಾಗಿದೆ.

RELATED NEWS

You cannot copy contents of this page