ರೈಲಿನಲ್ಲಿ ಹೆಣ್ಮಕ್ಕಳಿಗೆ ಕಿರುಕುಳ: ಇಬ್ಬರ ಸೆರೆ, ನ್ಯಾಯಾಂಗ ಬಂಧನ

ಕಾಸರಗೋಡು: ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಇಬ್ಬರು ಹೆಣ್ಮಕ್ಕಳಿಗೆ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿ  ಇಬ್ಬರನ್ನು ಕಾಸರ ಗೋಡು ರೈಲ್ವೇ ಪೊಲೀಸರು ಬಂಧಿಸಿದ್ದಾರೆ.

ಕಣ್ಣೂರು ಕೂಟ್ಟೂರು ನಿವಾಸಿ ಇ. ದೀಪು (36) ಮತ್ತು ಎರಮಂ ನಿವಾಸಿ ಪ್ರಮೋದ್ (54) ಬಂಧಿತ ಆರೋಪಿಗಳು.

ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರ ದರ್ಶನ ನಡೆಸಿ   ಇಬ್ಬರು ಹೆಣ್ಮಕ್ಕಳು  ತಮ್ಮ ಕುಟುಂಬದ  ಜತೆಗೆ ರೈಲಿನಲ್ಲಿ   ಹಿಂತಿರುಗುತ್ತಿದ್ದ ವೇಳೆ ರೈಲು  ಹೊಸದುರ್ಗ ಸಮೀಪಿಸುತ್ತಿದ್ದಂತೆ  ಆರೋಪಿಗಳು   ಹೆಣ್ಮಕ್ಕಳಿಗೆ ಕಿರುಕುಳ ನೀಡಲೆತ್ನಿಸಿದ್ದಾರೆ. ರೈಲು ಹೊಸದುರ್ಗ ನಿಲ್ದಾಣಕ್ಕೆ ತಲುಪಿದಾಗ    ಹೆಣ್ಮಕ್ಕಳಿಗೆ ಕಿರುಕುಳ ನೀಡಿದ ವಿಷಯವನ್ನು ರೈಲ್ವೇ ಭ ದ್ರತಾ ಪಡೆ ಅಧಿಕಾರಿಗಳಿಗೆ ತಿಳಿಸಲಾಗಿತ್ತು.  ಆ ಮಾಹಿತಿಯನ್ನು ಅಧಿಕಾರಿಗಳು ತಕ್ಷಣ ಕಾಸರಗೋಡು ರೈಲ್ವೇ ಪೊಲೀಸರಿಗೆ ರವಾನಿಸಿದ್ದರು. ಅದರಂತೆ ಕಾಸರಗೋಡು ರೈಲ್ವೇ ಪೊಲೀಸ್ ಠಾಣೆಯ ಎಸ್‌ಐ ರಾಜೀವನ್, ಸೀನಿಯರ್ ಸಿವಿಲ್ ಪೊಲೀಸ್ ಆಫೀಸರ್ ವಿಜಿತ್, ಸಿಪಿಒ ಜ್ಯೋತಿಷ್ ಜೋಸ್, ಆರ್‌ಪಿಎಫ್ ಹೆಡ್ ಕಾನ್‌ಸ್ಟೇಬಲ್ ಎಂಬಿವರ ನ್ನೊಳಗೊಂಡ ತಂಡ ಆರೋಪಿಗಳ ನ್ನು ಬಂಧಿಸಿದ್ದಾರೆ. ಆರೋಪಿಗಳನ್ನು ನಂತರ ಹೊಸ ದುರ್ಗ ಮೆಜಿಸ್ಟ್ರೇಟ್ ನ್ಯಾಯಾಲ ಯದ ಆದೇಶ ಪ್ರಕಾರ ನ್ಯಾಯಾಂಗ ಬಂಧನದಲ್ಲಿರಿಸಲಾಯಿತು.

You cannot copy contents of this page