ಯುವತಿ ನಾಪತ್ತೆ

ಬದಿಯಡ್ಕ: ಬದಿಯಡ್ಕ ಪೇಟೆಗೆಂದು ತಿಳಿಸಿ ಹೋದ ಯುವತಿ   ಮರಳಿ ಬಂದಿಲ್ಲವೆಂದು ದೂರಲಾಗಿದೆ. ಈ ಬಗ್ಗೆ ಯುವತಿಯ ಸಹೋದರ ನೀಡಿದ ದೂರಿನಂತೆ ಬದಿಯಡ್ಕ ಪೊಲೀಸರು ನಾಪತ್ತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ನೆಕ್ರಾಜೆ ಗ್ರಾಮದ ಬೀಜಂತ್ತಡ್ಕ ಎಂಬಲ್ಲಿನ  ಶ್ರೇಯ (21) ನಾಪತ್ತೆಯಾದ ಯುವತಿ. ಈ ಬಗ್ಗೆ ಈಕೆಯ ಸಹೋದರ ಶ್ರೇಯಸ್  ಪೊಲೀಸರಿಗೆ ದೂರು ನೀಡಿದ್ದಾರೆ.  ಅಕ್ಟೋಬರ್ 21ರಂದು ಬೆಳಿಗ್ಗೆ 11 ಗಂಟೆಗೆ  ಬದಿಯಡ್ಕ ಪೇಟೆಯಲ್ಲಿ ಆಧಾರ್ ಕಾರ್ಡ್ ಅಪ್‌ಡೇಟ್ ಮಾಡಲು ಹೋಗುವುದಾಗಿ ತಿಳಿಸಿ ಕ್ವಾರ್ಟರ್ಸ್‌ನಿಂದ  ಶ್ರೇಯ ಹೋಗಿದ್ದು ಅನಂತರ ಮರಳಿ ಬಂದಿಲ್ಲವೆಂದು  ದೂರಿನಲ್ಲಿ ತಿಳಿಸಲಾಗಿದೆ.

You cannot copy contents of this page