ಬಂಗ್ರಮಂಜೇಶ್ವರ ಕ್ಷೇತ್ರದಲ್ಲಿ ವಾರ್ಷಿಕ ಪ್ರತಿಷ್ಠಾ ಮಹೋತ್ಸವ

ಹೊಸಂಗಡಿ: ಬಂಗ್ರ ಮಂಜೇಶ್ವರ ಶ್ರೀ ಕಾಳಿಕಾ ಪರಮೇಶ್ವರೀ ದೇವಸ್ಥಾನ ದಲ್ಲಿ ನಡೆದ ವರ್ಷಾವಧಿ ಪ್ರತಿಷ್ಠಾ ಮಹೋತ್ಸವ ವಿವಿಧ ವೈದಿಕ, ಧಾರ್ಮಿಕ, ಸಾಂಸ್ಕöÈತಿಕ ಕಾರ್ಯಕ್ರಮಗಳೊಂದಿಗೆ ನಿನ್ನೆ ಸಮಾಪ್ತಿ ಗೊಂಡಿತು. ಶ್ರೀ ಮಾತಗೆ ಪಂಚಾಮೃತ ಸಹಿತ 108 ಸೀಯಾಳ ಅಭಿಷೇಕ, ಪ್ರಧಾನ ಹೋಮಗಳು, ರಂಗಪೂಜೆ, ಗುಳಿಗ ದೈವಕ್ಕೆ ತಂಬಿಲ ನಡೆಯಿತು. ಜಗದ್ಗುರು ಅನಂತಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತಿ ಸ್ವಾಮೀಜಿಯವರಿಗೆ ಪೂರ್ಣಕುಂಭ ಸ್ವಾಗತ ನೀಡಲಾಯಿತು. ಸ್ವಾಮೀಜಿ ಆಶೀರ್ವಚನ ನೀಡಿದರು. ಕ್ಷೇತ್ರದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಈ ವೇಳೆ ಕಾಸರಗೋಡು ಆರ್ಟಿಸನ್ ವೆಲ್ಫೇರ್ ಸೊಸೈಟಿ ಅಧ್ಯಕ್ಷ ಮೂವಾಜೆ ಸೀತಾರಾಮ ಆಚಾರ್ಯ ಮತ್ತು ಪ್ರತಿಭಾನ್ವಿತ ಯುವ ಕಲಾವಿದ ಹರಿಪ್ರಸಾದ್ ಆಚಾರ್ಯ ಉಳಿಯತ್ತಡ್ಕ ಇವರನ್ನು ಗೌರವಿಸಲಾಯಿತು.

RELATED NEWS

You cannot copy contents of this page