ಕೆಲಸಕ್ಕೆಂದು ಯುವಕನನ್ನು ಕರೆದೊಯ್ದು ಮೊಬೈಲ್ ಫೋನ್ ಲಪಟಾವಣೆ: ಮೂವರ ವಿರುದ್ಧ ಕೇಸು

ಕಾಸರಗೋಡು: ಕೆಲಸ ಇದೆಯೆಂದು ತಿಳಿಸಿ  ಯುವಕನನ್ನು ಕರೆದೊಯ್ದು ಹಲ್ಲೆಗೈದ ಬಳಿಕ ಮೊಬೈಲ್ ಫೋನ್ ಲಪಟಾಯಿಸಿರು ವುದಾಗಿ ದೂರಲಾಗಿದೆ. ಚೆಂಗಳ ಇಂದಿರಾನಗರದ ಕ್ವಾರ್ಟರ್ಸ್‌ನಲ್ಲಿ ವಾಸಿಸುವ ಪಶ್ಚಿಮ ಬಂಗಾಲ ನಿವಾಸಿ ರಾಮನ್ ಬರ್ಮನ್ (33) ಎಂಬಾತನಿಗೆ ಹಲ್ಲೆಗೈಯ್ಯಲಾಗಿದೆ.  ಇವರು ನೀಡಿದ ದೂರಿನಂತೆ ಮೂರು ಮಂದಿ ವಿರುದ್ಧ ಮೇಲ್ಪರಂಬ ಪೊಲೀಸರು ಕೇಸು ದಾಖಲಿಸಿಕೊಂಡಿ ದ್ದಾರೆ. ಮೊನ್ನೆ ರಾತ್ರಿ 8.30ರ ವೇಳೆ ಇಂದಿರಾನಗರದ ಕ್ವಾರ್ಟರ್ಸ್‌ಗೆ ತಲುಪಿದ ಮೂರು ಮಂದಿ ಕೆಲಸವಿದೆಯೆಂದು ತಿಳಿಸಿ ರಾಮನ್ ಬರ್ಮನ್‌ರನ್ನು  ಕರೆದೊಯ್ದಿದ್ದರು. ಚಟ್ಟಂಚಾಲ್ ರಾಷ್ಟ್ರೀಯ ಹೆದ್ದಾರಿಯ ಫ್ಲೈಓವರ್  ಕೊನೆಗೊಳ್ಳುವ ಭಾಗಕ್ಕೆ ತಲುಪಿದಾಗ ೧೬ ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೋನ್‌ನ್ನು  ಕಸಿದು ತೆಗೆದುಕೊಂಡು ತಂಡ  ಹಲ್ಲೆಗೈದಿರುವುದಾಗಿ ದೂರಲಾಗಿದೆ.  ದರೋಡೆಯನ್ನು ತಡೆಯಲೆತ್ನಿಸಿದಾಗ  ಕೊಲೆಗೈದಿರು ವುದಾಗಿ ಬೆದರಿಯೊಡ್ಡಿ  ಪರಾರಿಯಾ ಗಿರುವುದಾಗಿ ದೂರಲಾಗಿದೆ. ಘಟನೆ ಬಳಿಕ  ವಾಸಸ್ಥಳಕ್ಕೆ ತಲುಪಿದ  ರಾಮನ್ ಬರ್ಮನ್ ನಿನ್ನೆ ಸಂಜೆ ಮೇಲ್ಪರಂಬ ಪೊಲೀಸರಿಗೆ ದೂರು ನೀಡಿದ್ದಾರೆ.

RELATED NEWS

You cannot copy contents of this page