ಕ್ಷೇತ್ರದಿಂದ ಚಿನ್ನಾಭರಣ ಕಳವುಗೈದು ಪರಾರಿಯಾದ ಸಹಾಯಕ ಅರ್ಚಕ ಸೆರೆ

ಆಲಪ್ಪುಳ: ಕ್ಷೇತ್ರದಲ್ಲಿ ದೇವರ ವಿಗ್ರಹಕ್ಕೆ ತೊಡಿಸಿದ್ದ 20 ಪವನ್ ಚಿನ್ನಾಭರಣಗಳನ್ನು ಕಳವುಗೈದು ಪರಾರಿಯಾಗಿದ್ದ ಸಹಾಯಕ ಅರ್ಚಕ ಸೆರೆಗೀಡಾಗಿದ್ದಾನೆ. ಕೊಲ್ಲಂ ನಿವಾಸಿ ರಾಮಚಂದ್ರನ್ ಪೋಟಿ ಎಂಬಾತ ಸೆರೆಗೀಡಾದ ಆರೋಪಿಯಾಗಿದ್ದಾನೆ. ಈತ ಎಳುಪುನ್ನ ದಿ| ನಾರಾಯಣಪುರಂ ಮಹಾವಿಷ್ಣು ಕ್ಷೇತ್ರದಲ್ಲಿ ಸಹಾಯಕ ಅರ್ಚಕನಾಗಿದ್ದನು. ವಿಷು ದಿನದಂದು ಮುಖ್ಯ ಅರ್ಚಕ ರಜೆಯಲ್ಲಿ ತೆರಳಿದುದರಿಂದ ರಾಮಚಂದ್ರನ್ ಪೂಜೆಯ ಹೊಣೆಗಾರಿಕೆ ವಹಿಸಿಕೊಂಡಿದ್ದನು. ಈ ವೇಳೆ ದೇವರ ವಿಗ್ರಹದಲ್ಲಿದ್ದ 10 ಪವನ್‌ನ ಮಾಲೆ, ಮೂರೂವರೆ  ಪವನ್‌ನ ಕಿರೀಟ, 2 ನೆಕ್ಲೇಸ್ ಮೊದಲಾದವುಗಳನ್ನು  ಈತ ಕಳವು ನಡೆಸಿ ಪರಾರಿಯಾಗಿದ್ದನು. ಪೊಲೀಸರು ಮೊಬೈಲ್ ಫೋನ್ ಲೊಕೇಶನ್ ಕೇಂದ್ರೀಕರಿಸಿ ನಡೆಸಿದ ಕಾರ್ಯಾಚರಣೆಯಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಕಳವುಗೈದ ಚಿನ್ನಾಭರಣಗಳನ್ನು  ಆರೋಪಿಸಿ ಎರ್ನಾಕುಳಂನ ಬ್ಯಾಂಕ್‌ನಲ್ಲಿ ಅಡವಿರಿಸಿದ್ದಾ ನೆನ್ನಲಾಗಿದೆ.

RELATED NEWS

You cannot copy contents of this page