ದೆಹಲಿಯಲ್ಲಿ ಮನೆ ಸಮುಚ್ಛಯ ಕುಸಿದು ನಾಲ್ವರು ಮೃತ್ಯು: ಹಲವರು ಸಿಲುಕಿಕೊಂಡಿರುವ ಶಂಕೆ

ನವದೆಹಲಿ: ದೆಹಲಿಯ ಮುಸ್ತಫಾಬಾದ್ ಪ್ರದೇಶದಲ್ಲಿ ಇಂದು ಮುಂಜಾನೆ ವಸತಿ ಸಮುಚ್ಛಯ ಕಟ್ಟಡ ಕುಸಿದುಬಿದ್ದು ನಾಲ್ವರು ಸಾವನ್ನಪ್ಪಿದ ಘೋರ ದುರಂತ ನಡೆದಿದೆ.  ಅವಶೇಷಗಳಡಿಯಲ್ಲಿ ಇನ್ನೂ ಹಲವರು ಸಿಲುಕಿಕೊಂಡಿರುವುದಾಗಿ  ಶಂಕಿಸ ಲಾಗಿದೆ. ರಕ್ಷಣಾ ಕಾರ್ಯಾ ಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಮತ್ತು ದೆಹಲಿ ಪೊಲೀಸರು ತೊಡಗಿದ್ದಾರೆ. ಜೊತೆಗೆ ಅಗ್ನಿಶಾಮಕ ದಳವೂ ಸಹಕರಿಸುತ್ತಿದೆ. ಇಂದು ಮುಂಜಾನೆ 2.50ರ ವೇಳೆಗೆ  ಈ ದುರಂತವುಂಟಾಗಿದೆ. ಆ ವೇಳೆ  ಭಾರೀ ಗುಡುಗುಮಳೆ ಇತ್ತೆಂದು ಅಧಿಕಾರಿಗಳು ಹೇಳಿದ್ದಾರೆ.

You cannot copy contents of this page