ಕೇರಳೀಯಂ: ಅಡುಗೆ ಸ್ಪರ್ಧೆಯಲ್ಲಿ ಎಸ್‌ಟಿಎಸ್ ಪ್ರಥಮ

ಕಾಸರಗೋಡು: ನ. ೧ರಿಂದ ೭ರ ವರೆಗೆ ತಿರುವನಂತಪುರದಲ್ಲಿ ನಡೆಯುವ ಕೇರಳೀಯ ಕಾರ್ಯ ಕ್ರಮದ ಪ್ರಚಾರಾರ್ಥ ಜಿಲ್ಲಾ ಕುಟುಂಬಶ್ರೀ ಮಿಶನ್ ನೇತೃತ್ವದಲ್ಲಿ ವಿಶ್ವ ಆಹಾರ ದಿನದಂದು ಆಯೋ ಜಿಸಿದ ಅಡುಗೆ ಸ್ಪರ್ಧೆಯಲ್ಲಿ ಎಸ್‌ಟಿಎಸ್ ಕಾಸರಗೋಡು ಜಯಗಳಿಸಿದೆ. ಸತ್ಕಾರ ಮಡಿಕೈ ದ್ವಿತೀಯ ಸ್ಥಾನ ಹಾಗೂ ಇರಲ್ ಕಾಸರಗೋಡು ತೃತೀಯ ಸ್ಥಾನ ಪಡೆದಿದೆ. ಕಲೆಕ್ಟರೇಟ್‌ನ ಆವರಣದಲ್ಲಿ ನಡೆದ ಕಾರ್ಯಕ್ರಮ ವನ್ನು ಜಿ.ಪಂ. ಅಧ್ಯಕ್ಷೆ ಬೇಬಿ ಬಾಲಕೃಷ್ಣನ್ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಕೆ. ಇಂಬಶೇಖರ್ ಮುಖ್ಯ ಅತಿಥಿಯಾಗಿದ್ದರು. ಜಿಲ್ಲೆಯ ೧೦ ಕುಟುಂಬಶ್ರೀ ಘಟಕಗಳ ಮಧ್ಯೆ ಸ್ಪರ್ಧೆ ನಡೆಸಲಾಗಿದೆ.

ಪ್ರಥಮ ಸ್ಥಾನ ಪಡೆದ ಎಸ್‌ಟಿಎಸ್ ತಂಡಕ್ಕೆ ೫೦೦೦ ರೂ. ನಗದು, ಪ್ರಶಸ್ತಿ ಪತ್ರ, ತಿರುವನಂತಪುರದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಅವಕಾಶ ಲಭಿಸಿತು. ಹಲವರು ಭಾಗವಹಿಸಿದರು.

RELATED NEWS

You cannot copy contents of this page