ವಯನಾಡಿನಲ್ಲಿ ಮತ್ತೆ ಜೀವಹಾನಿ ಸೃಷ್ಟಿಸಿ ಕಾಡಾನೆಯ ದಾಂಧಲೆ

ಕಲ್ಪಟ್ಟಾ: ವಯನಾಡಿನಲ್ಲಿ ಕಾಡಾನೆ ಆಕ್ರಮಣದಿಂದ ಇನ್ನೊಂದು ಜೀವ ನಷ್ಟಗೊಂಡಿದೆ. ಎರ್ಮಕೊಲ್ಲಿ ಪುಳ್ಳಿಕುನ್ನು ಸಮೀಪದಲ್ಲಿ ಕಾಡಾನೆ ದಾಳಿ ನಡೆಸಿದ್ದು,ತಮಿಳುನಾಡು ತೇಣಿ ಕಂಬಂ ನಿವಾಸಿ ಅರ್ಮುಗನ್ (66) ಮೃತಪಟ್ಟಿದ್ದಾರೆ.  ತೋಟ ಕಾರ್ಮಿಕನಾಗಿದ್ದರು. ನಿನ್ನೆ ರಾತ್ರಿ 9.30ರ ವೇಳೆ ಮೇಪಡಿಯಿಂದ ಮನೆಗೆ  ಹಿಂತಿರುಗುತ್ತಿದ್ದ ಮಧ್ಯೆ ಚಹಾ ತೋಟದಲ್ಲಿ ಇವರಿಗೆ ಕಾಡಾನೆ ಆಕ್ರಮಿಸಿದೆ.  ಆನೆ ಘೀಳಿಡುವ ಸದ್ದು ಕೇಳಿ ಸ್ಥಳಕ್ಕೆ ಬಂದ ಪರಿಸರ ನಿವಾಸಿಗಳು ಅರ್ಮುಗನ್‌ರ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತರು ಪತ್ನಿ ಲಕ್ಷ್ಮಿ, ಮಕ್ಕಳಾದ ರಾಜನ್, ಶಕ್ತಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.  ಕಳೆದ ನಾಲ್ಕು ದಿನಗಳ ಮಧ್ಯೆ ಎರಡು ಸಾಕುಪ್ರಾಣಿಗಳನ್ನು  ಚಿರತೆ ಕೊಂದಿದೆ.

RELATED NEWS

You cannot copy contents of this page