ಕಾರ್ಮಾರು ಮಹಾವಿಷ್ಣು ಕ್ಷೇತ್ರದ ದಾರಂದ ಮುಹೂರ್ತ ೨೨ರಂದು

ಮÁನ್ಯ: ಜೀರ್ಣೋದ್ಧಾರ ಗೊಳ್ಳುತ್ತಿರುವ ಕಾರ್ಮಾರು ಮಹಾವಿಷ್ಣು ಕ್ಷೇತ್ರದ ಗರ್ಭಗುಡಿಯ ದಾರಂದ ಮಹೂರ್ತ ಎಡನೀರು ಮಠಾಧೀಶ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿಗಳವರ ಉಪಸ್ಥಿತಿಯಲ್ಲಿ ದೇಲಂಪಾಡಿ ಗಣೇಶ ತಂತ್ರಿಗಳವರ ನೇತೃತ್ವದಲ್ಲಿ ಅಕ್ಟೋಬರ್ ೨೨ರಂದು ಜರಗಲಿದೆ. ಅಂದು ಬೆಳಗ್ಗೆ ೯ರಿಂದ ವಿವಿಧ ಭಜನಾ ತಂಡಗಳಿAದ ಭಜನೆ ನಂತರ ೧೧.೦೮ರಿಂದ ಮಹಾವಿಷ್ಣು ದೇವರ ಗರ್ಭಗುಡಿಗೆ ದಾರಂದ ಇಡುವುದು ನಂತರ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಶ್ರೀ ಸಚ್ಚಿದಾನಂದ ಭಾರತಿ ಸ್ವಾಮೀಜಿಗಳ ವರು ಆಶೀರ್ವಚನ ನೀಡಲಿರುವರು. ಮಂಗಳೂರಿನ ಉದ್ಯಮಿ ಮಧು ಸೂದನ ಆಯರ್, ನಾರಾಯಣ ಮಾಸ್ಟರ್ ಚರ್ಲಡ್ಕ, ಡಾಕ್ಟರ್ ನಾಗರಾಜ ಭಟ್ ಕಾಸರಗೋಡು, ಉದ್ಯಮಿ ರಾಮ್ ಪ್ರಸಾದ್ ಕಾಸರಗೋಡು, ಗೋಪಾಲಕೃಷ್ಣ ಕುಲಾಲ್ ವಾಂತಿಚಾಲು, ಉದಯ ಚೆಟ್ಟಿಯಾರ್ ಬಜಕೂಡ್ಲು ಉಪಸ್ಥಿತರಿರುವರು.

RELATED NEWS

You cannot copy contents of this page