ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನನ್ನು ಕೊಂದು ತಿಂದ ನರಭಕ್ಷಕ ಹುಲಿ

ಮಲಪ್ಪುರಂ: ಬೆಳಿಗ್ಗೆ ಎಂದಿನಂತೆ ರಬ್ಬರ್ ತೋಟಕ್ಕೆ ಟಾಪಿಂಗ್ ಕೆಲಸಕ್ಕೆ ಹೋಗುತ್ತಿದ್ದ ಕಾರ್ಮಿಕನನ್ನು ನರಭಕ್ಷಕ ಹುಲಿಯೊಂದು ಕೊಂದು ತಿಂದ ಘಟನೆ ಮಲಪ್ಪುರಂ ಜಿಲ್ಲೆಯ ಕಾಳಿಕಾವು ಎಂಬಲ್ಲಿ ನಿನ್ನೆ ನಡೆದಿದೆ. ತೀವ್ರಗೊಂಡಿದೆ. ಕಾಳಿಕಾವು ಕಲ್ಲಾಮೂಲೆ ಪಾಲತ್ತಿಂಗಾಲ್‌ನ ಕಳಪರಂಬಿಲ್ ಗಫೂರ್ ಅಲಿ (41) ಹುಲಿ ದಾಳಿಗೆ ಬಲಿಯಾದ ದುರ್ದೈವಿ ಕಾರ್ಮಿಕ.

ರಬ್ಬರ್ ಟ್ಯಾಪಿಂಗ್ ಕಾರ್ಮಿಕ ನಾಗಿರುವ ಗಫೂರ್ ಅಲಿ ಎಂದಿನಂತೆ ನಿನ್ನೆ ಬೆಳಿಗ್ಗೆ ಮಲೆನಾಡ ವಲಯವಾದ ಕಾಳಿಕಾವಿಗೆ ಸಮೀಪದ ಅಡಯಾಕುಂಡು ರಾವುತ್ತನ್‌ಕಾಡ್ ಮಲೆಯ ರಬ್ಬರ್ ತೋಟಕ್ಕೆ ಇನ್ನೋರ್ವ ಕಾಮಿನ ಕಲ್ಲಾಮುಲ ಅಬ್ದುಲ್ ಸವಾದ್‌ನ ಜೊತೆ ಹೋದ ವೇಳೆ ಆ ರಬ್ಬರ್ ತೋಟದಲ್ಲಿ ಅವಿತುಕೊಂಡಿದ್ದ ಹುಲಿಯೊಂದು ದಿಢೀರ್ ಆಗಿ ಗಫೂರ್ ಅಲಿಯ ಮೇಲೆ ಎರಗಿ ಅವರ ಕುತ್ತಿಗೆ ಕಚ್ಚಿ ಎಳೆದುಕೊಂಡು ಹೋಗಿದೆ. ಸ್ನೇಹಿತ ಅಬ್ದುಲ್ ಸಮದ್‌ನ ಕಣ್ಣಮುಂದೆಯೇ ಹುಲಿ ದಾಳಿ ನಡೆದಿದೆ. ಅವರು ಹೆದರಿ ಜೋರಾಗಿ ಬೊಬ್ಬೆಹಾಕಿದಾಗ ಇತರ ಕಾರ್ಮಿಕರು, ಪರಿಸರದವರು, ಅಲ್ಲಿಗೆ ತಕ್ಷಣ ಓಡಿ ಬಂದು ವ್ಯಾಪಕ ಶೋಧ ಆರಂಭಿಸಿದಾಗ ಹುಲಿ ದಾಳಿ ನಡೆಸಿದ ಸ್ಥಳದಿಂದ ಸುಮಾರು ೩೦೦ ಮೀಟರ್ ದೂರದಲ್ಲಿ ಗಫೂರ್ ಅಲಿಯವರ ಮೃತದೇಹ ಪತ್ತೆಯಾಗಿದೆ. ದೇಹದ ಹಿಂದಿನ ಭಾಗದ ಕುತ್ತಿಗೆ ಮತ್ತು ಇತರ ಭಾಗದ ಮಾಂಸವನ್ನು ಹುಲಿ ತಿಂದುಹಾಕಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.

ಈ ಪ್ರದೇಶದಲ್ಲಿ ಹುಲಿಗಳ  ಕಾಟವಿದ್ದರೂ, ಅದಕ್ಕೆ ಪರಿಹಾರ ಕಂಡುಕೊಳ್ಳಲು ತಯಾರಾಗದ ಅರಣ್ಯ ಇಲಾಖೆಯ ನಿಲುವನ್ನು ಪ್ರತಿಭಟಿಸಿ, ಇತರ ಕಾರ್ಮಿಕರು ಹಾಗೂ ಊರವರು ಅಲ್ಲಿ ಜಮಾಯಿಸಿ ತೀವ್ರ ಪ್ರತಿಭಟಿಸಿದರು. ಮೃತದೇಹವನ್ನು ಅಲ್ಲಿಂದ ಸಾಗಿಸಲು ಬಿಡದೆ ಅದನ್ನು ನಾಲ್ಕು ಗಂಟೆ ತನಕ ತಡೆಯೊಡ್ಡಿದರು. ನಂತರ ಶಾಸಕ ಅನಿಲ್ ಕುಮಾರ್ ಮತ್ತು ಪರಿಂದಲ್‌ಮಣ್ ಪೊಲೀಸರು ಆಗಮಿಸಿ ಚರ್ಚೆ ನಡೆಸಿದ ಬಳಿಕ ಮೃತದೇಹವನ್ನು ಮಂಜೇರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸಾಗಿಸಲಾಯಿತು.

RELATED NEWS

You cannot copy contents of this page