ಕಲ್ಲಿಕೋಟೆ ಹೊಸ ಬಸ್ ನಿಲ್ದಾಣದಲ್ಲಿ ಬೆಂಕಿ ಆಕಸ್ಮಿಕ: ಕಾರಣ ಪತ್ತೆಗೆ ತಪಾಸಣೆ ಇಂದು

ಕಲ್ಲಿಕೋಟೆ: ಇಲ್ಲಿನ ಹೊಸ ಬಸ್ ನಿಲ್ದಾಣದ ವ್ಯಾಪಾರ ಸಮುಚ್ಚಯದಲ್ಲಿ ಉಂಟಾದ ಬೆಂಕಿ ಆಕಸ್ಮಿಕದ ಕಾರಣವನ್ನು ಪತ್ತೆ ಮಾಡಲು ಅಗ್ನಿಶಾಮಕದಳ ಇಂದು ತಪಾಸಣೆ ನಡೆಸಲಿದೆ. ಜಿಲ್ಲಾಧಿಕಾರಿ ನಿರ್ದೇಶ ನೀಡಿದ ಪ್ರಕಾರ ಈ ತಪಾಸಣೆ ನಡೆಯಲಿದೆ. ಜಿಲ್ಲಾ ಫಯರ್ ಆಫೀಸರ್ ಪರಿಶೀಲಿಸು ವರು. ವರದಿಯನ್ನು ಇಂದೇ ಜಿಲ್ಲಾಧಿಕಾರಿಗೆ ನೀಡಬೇಕು ಎಂದು ಸೂಚಿಸಲಾಗಿದೆ. 2 ದಿನದೊಳಗೆ ಸಮಗ್ರ ವರದಿ ಸಲ್ಲಿಸಲು ಚೀಫ್ ಸೆಕ್ರೆಟರಿ ಸೂಚಿಸಿದ್ದಾರೆ.

ಮೂರು ಮಹಡಿಯ ಕಟ್ಟಡದಲ್ಲಿ ಮೇಲಿನ ಎರಡು ಮಹಡಿಗಳಲ್ಲಿ ನಿನ್ನೆ ಸಂಜೆ ೪.೨೦ಕ್ಕೆ ಬೆಂಕಿ ಆಕಸ್ಮಿಕ ಸಂಭವಿಸಿದೆ. ಮಲಬಾರಿನ ವಿವಿಧ ಕಡೆಗಳ ಅಗ್ನಿಶಾಮಕದಳ 15 ತಂಡಗಳು ಅರ್ಧ ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಲಾಗಿದೆ. ಕಲ್ಲಿಕೋಟೆ ಹೊಸ ಬಸ್ ನಿಲ್ದಾಣ ಕಟ್ಟಡದ ಕಾಲಿಕಟ್ ಟೆಕ್ಸ್‌ಟೈಲ್ಸ್‌ನ ಬಟ್ಟೆಬರೆ ಗೋದಾಮು ಸಮೀಪದ ಪಿ.ಆರ್.ಸಿ ಮೆಡಿಕಲ್ ಶಾಪ್ ಪೂರ್ಣವಾಗಿ ಹೊತ್ತಿ ಉರಿದಿದೆ. ಆದರೆ ಯಾರಿಗೂ ಅಪಾಯ ಉಂಟಾಗಿಲ್ಲ.

RELATED NEWS

You cannot copy contents of this page