ಕೋಳಿ ಅಂಕ: 5 ಮಂದಿ ಸೆರೆ; 4 ಕೋಳಿ, ಹಣ ವಶ

ಕುಂಬಳೆ: ಹೇರೂರು ಚೋಕೆಕುನ್ನು ಎಂಬಲ್ಲಿ ಕೋಳಿ ಅಂಕದಲ್ಲಿ ನಿರತರಾದ ೫ ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ ನಾಲ್ಕು ಕೋಳಿಗಳು ಹಾಗೂ 6400 ರೂಪಾಯಿ ವಶಪಡಿಸಲಾಗಿದೆ.

ಹೇರೂರು ನಿವಾಸಿಗಳಾದ ರವಿ ಶೆಟ್ಟಿ (48), ಐತ್ತಪ್ಪ ಪೂಜಾರಿ (62), ಬಾಲಕೃಷ್ಣ ಶೆಟ್ಟಿ (58), ಮಧೂರು ಮುಟ್ಟತ್ತೋಡಿಯ ಕರುಣಾಕರ (42), ಕಯ್ಯಾರಿನ ರೇಮಂಡ್ ಡಿ’ಸೋಜಾ (60) ಎಂಬಿವರನ್ನು ಬಂಧಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ನಿನ್ನೆ ಸಂಜೆ 4 ಗಂಟೆಗೆ ಚೋಕೆಕುನ್ನುನಲ್ಲಿ ಕೋಳಿ ಅಂಕ ನಡೆಯುತ್ತಿರುವ ಬಗ್ಗೆ ಲಭಿಸಿದ ಮಾಹಿತಿಯಂತೆ ಕುಂಬಳೆ ಎಸ್‌ಐ ಕೆ. ಶ್ರೀಜೇಶ್ ನೇತೃತ್ವದಲ್ಲಿ ಪೊಲೀಸ ರಾದ ಚಂದ್ರನ್, ಮನು, ರಜೀಶ್ ಎಂಬಿವರು ಕಾರ್ಯಾಚರಣೆ ನಡೆಸಿದ್ದರು.

You cannot copy contents of this page