ಕಾರಿನಲ್ಲಿ ಸಾಗಿಸುತ್ತಿದ್ದ ತಂಬಾಕು ಉತ್ಪನ್ನ ವಶ: ಇಬ್ಬರ ವಿರುದ್ಧ ಕೇಸು
ಕಾಸರಗೋಡು: ಕಾರಿನಲ್ಲಿ ಸಾಗಿಸುತ್ತಿದ್ದ ಕೇರಳದಲ್ಲಿ ನಿಷೇಧ ಹೇರಲಾಗಿರುವ 19,185 ಪ್ಯಾಕೆಟ್ ತಂಬಾಕು ಉತ್ಪನ್ನಗಳನ್ನು ಚೆಟ್ಟುಂಗುಳಿಯಲ್ಲಿ ನಿನ್ನೆ ನಡೆಸಿದ ಕಾರ್ಯಾಚರಣೆಯಲ್ಲಿ ವಿದ್ಯಾನಗರ ಠಾಣೆಯ ಎಸ್‌ಐ ಪ್ರಜೀಶ್ ನೇತೃತ್ವದ ಪೊಲೀಸರ ತಂಡ ಪತ್ತೆಹಚ್ಚಿ ವಶಪಡಿಸಿಕೊಂಡಿದೆ.
ಇದಕ್ಕೆ ಸಂಬಂಧಿಸಿ ಉಳಿಯತ್ತಡ್ಕ ಸಮೀಪದ ನೇಶನಲ್ ನಗರದ ಪಳ್ಳಂ ಹೌಸ್‌ನ ಖಮರುದ್ದೀನ್ ಎ (34) ಮತ್ತು ಸೌತ್ ತೃಕ್ಕರಿಪುರದ ಮೊಹಮ್ಮದ್ ಶಫೀಕ್ (26) ಎಂಬಿವರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮಾಲು ಸಾಗಿಸಲು ಉಪಯೋಗಿ ಸಲಾದ ಕಾರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.